
ಸಾವು
ಪ್ರಾತಿನಿಧಿಕ ಚಿತ್ರ
ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಸುಳ್ಯ, ಕಡಬ, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆಯಾಗಿದೆ. ಮಳೆಯ ಜೊತೆ ಗಾಳಿಯೂ ಇದ್ದು, ಹಲವೆಡೆ ಹಾನಿಯೂ ಸಂಭವಿಸಿದೆ. ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವನಮೂಲೆಯಲ್ಲಿ ಗಾಳಿಯಿಂದ ಕೂಡಿದ ಮಳೆಗೆ ಮರ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಮೀನಾಕ್ಷಿ (65) ಎಂದು ಗುರುತಿಸಲಾಗಿದೆ. ಮನೆಯ ಕರುವೊಂದನ್ನು ತೋಟದಲ್ಲಿ ಕಟ್ಟಿದ್ದ ಅವರು, ಮಳೆ ಬರುವಾಗ ಅದನ್ನು ಹಟ್ಟಿಗೆ ಕರೆತರಲು ಹೋಗಿದ್ದರು. ಆಗ ಉಪ್ಪಳಿಗೆ ಮರವು ಅವರ ಮೇಲೆಯೇ ಬಿದ್ದಿತ್ತು.
ವಾಯು ಭಾರ ಕುಸಿತ:
ಅರಬ್ಬಿ ಸಮುದ್ರದ ನೈರುತ್ಯ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದಾಗಿ ಒಂದು ವಾರಗಳ ಕಾಲ ಗುಡುಗು ಸಿಡಿಲಿನಿಂದ ಕೂಡಿದ ಮಳೆ ಆಗುವ ನಿರೀಕ್ಷೆ ಇದೆ. ಗಂಟೆಗೆ 40 ಕಿ.ಮೀಯಿಂದ 50 ಕಿ.ಮೀ ವೇಗದಲ್ಲಿ ಗಾಳಿಯೂ ಬೀಸುವ ಸಾಧ್ಯತೆ ಇದೆ. ಇದೇ 18ರವರೆಗೆ ಕರಾವಳಿಯ ಕೆಲವು ಕಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.