ADVERTISEMENT

ಸಂಪರ್ಕ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ - ಸುಧಾಕರನ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 13:43 IST
Last Updated 5 ಜುಲೈ 2018, 13:43 IST
ಬದಿಯಡ್ಕ ಸಮೀಪದ ನೀರ್ಚಾಲಿನಿಂದ ಕಾಸರಗೋಡಿಗೆ ಸಾಗುವ ಕೊರತ್ತಿಗುಳಿ ಸೇತುವೆಯನ್ನು ಕೇರಳ ರಾಜ್ಯ ಲೋಕೋಪಯೋಗಿ ಸಚಿವ ಸುಧಾಕರನ್ ಈಚೆಗೆ ಉದ್ಘಾಟಿಸಿ ಮಾತನಾಡಿದರು. (ಬದಿಯಡ್ಕ ಚಿತ್ರ)
ಬದಿಯಡ್ಕ ಸಮೀಪದ ನೀರ್ಚಾಲಿನಿಂದ ಕಾಸರಗೋಡಿಗೆ ಸಾಗುವ ಕೊರತ್ತಿಗುಳಿ ಸೇತುವೆಯನ್ನು ಕೇರಳ ರಾಜ್ಯ ಲೋಕೋಪಯೋಗಿ ಸಚಿವ ಸುಧಾಕರನ್ ಈಚೆಗೆ ಉದ್ಘಾಟಿಸಿ ಮಾತನಾಡಿದರು. (ಬದಿಯಡ್ಕ ಚಿತ್ರ)   

ಬದಿಯಡ್ಕ : ಕಾಸರಗೋಡಿನ ಮಲೆನಾಡು, ಕರಾವಳಿ ಹಾಗೂ ಗ್ರಾಮೀಣ ಪ್ರದೇಶಗಳ ಸಂಪರ್ಕ ವ್ಯವಸ್ಥೆ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ' ಎಂದು ಕೇರಳ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಜಿ ಸುಧಾಕರನ್ ಹೇಳಿದರು.

ನೀರ್ಚಾಲು-ಕಾಸರಗೋಡು ಮೆಕ್ಡಾಂ ಡಾಮರೀಕರಣ ಹಾಗೂ ನೂತನವಾಗಿ ನಿರ್ಮಿಸಿದ ಕೊರತ್ತಿಗುಳಿ ಸೇತುವೆಯನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಕೆಲಸಗಳು ಆಗಸ್ಟ್ ತಿಂಗಳಿಂದ ಆರಂಭವಾಗಲಿದೆ. ಅದು ಕಾಸರಗೋಡು ಜಿಲ್ಲೆಯಿಂದ ಆರಂಭವಾಗಲಿದೆ. ಜಿಲ್ಲೆಯಲ್ಲಿ ಹಾದು ಹೋಗುವ ಸುಮಾರು 80 ಕಿ.ಮೀ. ರಸ್ತೆ ವಿಸ್ತರಣೆಗೆ ₹4300 ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆಯ ಉತ್ತರ ವಿಭಾಗ ಎಂಜಿನಿಯರ್‌ ವಿ ಕೆ ಮಿನಿ , ಮಧೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿವಾಕರ ಆಚಾರ್ಯ, ಮುಖಂಡರಾದ ಎ ಎಸ್ ಮೊಹಮ್ಮದ್, ಪ್ರಭಾಕರ ರೈ, ಮಾಹಿನ್ ಕೇಳೋಟ್, ಪ್ರೇಮ ಕುಮಾರಿ, ಎಂ ಎಚ್ ಜನಾರ್ದನ , ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎನ್ ಕೃಷ್ಣ ಭಟ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.