ADVERTISEMENT

ಮಂಗಳೂರು ವಿವಿ: ಕನಕದಾಸರ ಕುರಿತ ಪ್ರಬಂಧಗಳ ಆಹ್ವಾನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 6:40 IST
Last Updated 25 ಜೂನ್ 2022, 6:40 IST
ಕನಕದಾಸ
ಕನಕದಾಸ   

ಮಂಗಳೂರು: ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರವು ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಿರುವ`ಕನಕ ಸಾಹಿತ್ಯ ಸಮ್ಮೇಳನ’ದ ಅಂಗವಾಗಿ ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಾರ್ವಜನಿಕರಿಂದ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.

‘ಉಪನಿಷತ್ತು ಚಿಂತನೆಗಳು ಮತ್ತು ಕನಕದಾಸರು’, ‘ಕನಕದಾಸರಲ್ಲಿ ಪುರಾಣ ಪ್ರಜ್ಞೆ’, `ದ್ವೈತ-ಅದ್ವೈತ ಚಿಂತನೆಗಳು ಮತ್ತು ಕನಕ’, `ಐತಿಹ್ಯಗಳು ಕಟ್ಟಿಕೊಡುವ ಕನಕದಾಸರ ವ್ಯಕ್ತಿತ್ವ’, `ವಚನ ಸಾಹಿತ್ಯ ಮತ್ತು ಕನಕ’,`ಕನಕದಾಸರ ಕೃತಿಗಳಲ್ಲಿ ಅಭಿವ್ಯಕ್ತಿಗೊಂಡ ವಿಜಯನಗರ ಸಾಮ್ರಾಜ್ಯ’, `ಭಜನೆ ಸಾಹಿತ್ಯ ಮತ್ತು ಕನಕದಾಸರು’, `ಕನಕದಾಸರ ಕೃತಿಗಳಲ್ಲಿ ಆಧುನಿಕತೆಯ ಪರಿಕಲ್ಪನೆ’, `ಅಲ್ಲಮನ ಬೆಡಗಿನ ವಚನಗಳು ಮತ್ತು ಕನಕದಾಸರ ಮುಂಡಿಗೆಗಳು’, `ಕನಕದಾಸರ ಕೃತಿಗಳ ಪ್ರಸ್ತುತತೆ’ (ಯಾವುದಾದರು ಒಂದು ಕೃತಿಯನ್ನು ಅನುಲಕ್ಷಿಸಿ), `ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’, `ಭಕ್ತ ಕನಕದಾಸ -ಸಿನಿಮಾ ವಿಶ್ಲೇಷಣೆ’, `ಕವಿಗಳು ಕಂಡಂತೆ ಕನಕ’ ಮುಂತಾದವುಗಳಲ್ಲಿ ಯಾವುದಾದರು ಒಂದು ವಿಷಯದ ಕುರಿತು 8 ಪುಟ ಮೀರದ ಪ್ರಬಂಧವನ್ನು kanakadasaresearchcenter2008@gmail.comಗೆ ಕಳುಹಿಸಬೇಕು. ಅಂಚೆ ಮೂಲಕ ಸಂಯೋಜಕರು, ಕನಕದಾಸ ಸಂಶೋಧನ ಕೇಂದ್ರ, ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ-574199 ಎಂಬ ವಿಳಾಸಕ್ಕೆ ಕಳುಹಿಸಬಹುದು. ಜುಲೈ 15ರ ಒಳಗೆ ಪ್ರಬಂಧಗಳನ್ನು ಸಲ್ಲಿಸಬೇಕು ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಯ್ದ ಪ್ರಬಂಧಗಳನ್ನು ‘ಕನಕ ಸಾಹಿತ್ಯ ಸಮ್ಮೇಳನ’ದ ರಾಷ್ಟ್ರೀಯ ವಿಚಾರಸಂಕಿರಣ ಗೋಷ್ಠಿಯಲ್ಲಿ ಮಂಡಿಸಲು ಅವಕಾಶವಿದೆ. ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಮಾಹಿತಿಗೆ ಆನಂದ ಎಂ. ಕಿದೂರು (9591480138) ಅವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.