ಮೂಡುಬಿದಿರೆ: ಸೋಮವಾರ ಸಂಜೆ ಸುರಿದ ಭಾರಿ ಗಾಳಿ–ಮಳೆಗೆ ತಾಲ್ಲೂಕಿನ ಬೋರುಗುಡ್ಡೆಯಲ್ಲಿ ಬಸದಿ, ಅಂಗಡಿ ಹಾಗೂ ಹಲವು ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ.
ಸುಮಾರು ಹತ್ತು ವಿದ್ಯುತ್ ತಂತಿಗಳು ರಸೆಗ್ತೆ ಬಿದ್ದು ಶಿರ್ತಾಡಿ, ಹೊಸ್ಮಾರು ಮಧ್ಯೆ ವಾಹನ ಸಂಚಾರ ಹಲವು ತಾಸು ಸ್ಥಗಿತಗೊಂಡಿತ್ತು.
ಅಳಿಯೂರು ಬಸದಿಗೆ ಮರ ಬಿದ್ದು ಹಾನಿಯಾಗಿದೆ. ಬೋರುಗುಡ್ಡೆಯಲ್ಲಿ ಪಿಜಿನ ಪೂಜಾರಿ, ಹರೀಶ್ ಜೈನ್ ಮನೆಗೆ ಹಾಗೂ ಶೇಖರ ಪೂಜಾರಿ ಅವರ ಅಂಗಡಿಗೆ ಮರ ಬಿದ್ದು ಹಾನಿಯಾಗಿದೆ. ಮೂಡುಮಾರ್ನಾಡು ತಂಡ್ರಕೆರೆಯಲ್ಲಿ ಜಯಂತಿ ಎಂಬುವರ ಮನೆಯ ಶೀಟ್ ಹಾರಿ ಹೋಗಿದೆ. ವಾಲ್ಪಾಡಿಯಲ್ಲಿ ಅಶ್ರಫ್ ಅವರ ಮನೆಗೂ ಹಾನಿಯಾಗಿದೆ. ಹಲವೆಡೆ ವಿದ್ಯುತ್ ಸಂಚಾರವೂ ಸ್ಥಗಿತಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.