ADVERTISEMENT

ಪ್ರತಿಭೆಯ ಪೋಷಣೆಯಿಂದ ಬದುಕಿನ ದಿಸೆ ಬದಲು: ಡಾ.ಕುಮಾರ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:27 IST
Last Updated 26 ನವೆಂಬರ್ 2022, 4:27 IST
ಸ್ಪರ್ಧೆಯ ಟ್ರೋಫಿಗಳನ್ನು ಡಾ.ಕುಮಾರ್ ಅವರು ಅನಾವರಣಗೊಳಿಸಿದರು. ಡಾ.ಜೂಲಿಯೆಟ್‌ ಸಿ.ಜೆ., ಡಾ.ಸೋಫಿಯಾ ಫರ್ನಾಂಡಿಸ್‌, ಜೈನಾಬ್‌ ಶಿರೀನ್‌, ಏಂಜೆಲ್‌ ರೋಶನಿ, ಅಂಶುಕುಮಾರ್‌ ಹಾಗೂ ಸಾರಿಕ್‌ ಅಂಕಿತಾ ಇದ್ದಾರೆ– ಪ್ರಜಾವಾಣಿ ಚಿತ್ರ
ಸ್ಪರ್ಧೆಯ ಟ್ರೋಫಿಗಳನ್ನು ಡಾ.ಕುಮಾರ್ ಅವರು ಅನಾವರಣಗೊಳಿಸಿದರು. ಡಾ.ಜೂಲಿಯೆಟ್‌ ಸಿ.ಜೆ., ಡಾ.ಸೋಫಿಯಾ ಫರ್ನಾಂಡಿಸ್‌, ಜೈನಾಬ್‌ ಶಿರೀನ್‌, ಏಂಜೆಲ್‌ ರೋಶನಿ, ಅಂಶುಕುಮಾರ್‌ ಹಾಗೂ ಸಾರಿಕ್‌ ಅಂಕಿತಾ ಇದ್ದಾರೆ– ಪ್ರಜಾವಾಣಿ ಚಿತ್ರ   

ಮಂಗಳೂರು: ‘ಎಲ್ಲರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೋಷಿಸಿದರೆ, ಅದು ಬದುಕಿನ ದಿಸೆಯನ್ನೇ ಬದಲಿಸಬಲ್ಲುದು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್‌ ಅಭಿಪ್ರಾಯಪಟ್ಟರು.

ನಗರದ ರೋಶನಿ ನಿಲಯದ ಸ್ಕೂಲ್‌ ಆಫ್‌ ಸೋಷಿಯಲ್‌ ವರ್ಕ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತರ ಕಾಲೇಜು ಪ್ರತಿಭಾ ಶೋಧ ಸ್ಪರ್ಧೆ ‘ಎಕ್ಸ್ಪ್ರೆಷನ್ಸ್‌ 2022– ಫ್ಯಾಂಡೋಮ್‌’ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನ ಅತ್ಯಂತ ಅವಿಸ್ಮರಣೀಯ. ಬದುಕಿನ ಬಗ್ಗೆವಿದ್ಯಾರ್ಥಿ ದೆಸೆಯಲ್ಲೇ ಮಹಾತ್ವಾಕಾಂಕ್ಷೆಯನ್ನು ಹೊಂದಬೇಕು’ ಎಂದು ಅವರು ಕಿವಿಮಾತು ಹೇಳಿದರು.

ADVERTISEMENT

ಡಿಸಿಪಿ (ಕಾನೂನು ಸುವ್ಯವಸ್ಥೆ) ಅಂಶುಕುಮಾರ್‌, ‘ನಮ್ಮಲ್ಲಿರುವ ಪ್ರತಿಭೆಗೆ ಸೂಕ್ತ ಅವಕಾಶಗಳನ್ನು ಇಂತಹ ಸ್ಪರ್ಧೆಗಳು ಒದಗಿಸುತ್ತವೆ. ನಮ್ಮಲ್ಲಿ ಯಾವ ಪ್ರತಿಭೆ ಇದೆ ಎಂದು ಗುರುತಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು‘ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಸೊಫಿಯಾ ಫರ್ನಾಂಡಿಸ್‌ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಪ್ರಾಂಶುಪಾಲರಾದ ಡಾ.ಜೂಲಿಯೆಟ್‌ ಸಿ.ಜೆ. ಸ್ವಾಗತಿಸಿದರು. ಡೀನ್‌ ಸಾರಿಕ್‌ ಅಂಕಿತಾ ವಂದಿಸಿದರು. ವಿದ್ಯಾರ್ಥಿ ಸಂಘದ ನಾಯಕಿ ಏಂಜೆಲ್‌ ರೋಶಿನಿ, ಪ್ರಧಾನ ಕಾರ್ಯದರ್ಶಿ ಜೈನಾಬ್‌ ಶಿರೀನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.