ಮಂಗಳೂರು: ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂಬ ಆಸೆ ತೋರಿಸಿ ₹ 9.78 ಲಕ್ಷ ಹಣ ಕಟ್ಟಿಸಿಕೊಂಡು ವಂಚಿಸಿದ ಬಗ್ಗೆ ನಗರ ದಕ್ಷಿಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಮನೆಯಲ್ಲೇ ಕೆಲಸ ಮಾಡಿ ಹೆಚ್ಚು ಹಣ ಗಳಿಸಿ ಎಂಬ ಜಾಹೀರಾತು ನನ್ನ ವಾಟ್ಸ್ ಆ್ಯಪ್‌ಗೆ ಬಂದಿತ್ತು. ಅದರಲ್ಲಿ ₹ 10 ಸಾವಿರ ಹೂಡಿಕೆ ಮಾಡಿ ₹ 18 ಸಾವಿರ ಗಳಿಸಬಹುದು ಎಂದು ತಿಳಿಸಿದ್ದರು. ಅವರು ಸೂಚಿಸಿದ ಖಾತೆಗೆ ಆ. 6ರಂದು ₹ 10 ಸಾವಿರ ಪಾವತಿಸಿದ್ದೆ. ಬಳಿಕ ಆ. 8ರಂದು ₹ 40 ಸಾವಿರ ಸೇರಿ ಕಟ್ಟಿದ್ದೆ. ಅವರು ನೀಡಿದ ಟಾಸ್ಕ್ ಪೂರ್ಣಗೊಳಿಸಿದ್ದಲ್ಲದೇ ಒಟ್ಟು ₹ 9.78 ಲಕ್ಷ ಪಾವತಿಸಿದ್ದೆ. ಅವರು ನನಗೆ ಹಣವನ್ನು ಮರುಪಾವತಿ ಮಾಡದೇ ವಂಚಿಸಿದ್ದಾರೆ’ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ವಿಚಾರಣೆ ನೆಪ ₹ 2.20 ಲಕ್ಷ ವಂಚನೆ: ವ್ಯಕ್ತಿಯೊಬ್ಬರನ್ನು ಸ್ಕೈಪ್ ಮೂಲಕ ಸಂಪರ್ಕಿಸಿದ್ದ ಆರೋಪಿಗಳು ‘ಫೆಡೆಕ್ಸ್ ಕಂಪನಿಯಿಂದ ತಮಗೆ ಕಳುಹಿಸಲಾದ ಪಾರ್ಸೆಲ್‌ನಲ್ಲಿ ಮಾದಕ ದ್ರವ್ಯ ಇದೆ’ ಎಂದು ಆರೋಪಿಸಿ ಪೊಲೀಸರ ಸೋಗಿನಲ್ಲಿ ಆನ್‌ಲೈನ್ ಮೂಲಕ ವಿಚಾರಣೆ ನಡೆಸುವ ನೆಪದಲ್ಲಿ ಅವರಿಂದ ₹ 2.20 ಲಕ್ಷ ಕಟ್ಟಿಸಿಕೊಂಡು ವಂಚಿಸಿದ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.