ADVERTISEMENT

ನಿವೃತ್ತ ಮೇಜರ್ ವೀರನಗರದ ವಿಜಯಚಂದ್ರಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 15:46 IST
Last Updated 11 ಅಕ್ಟೋಬರ್ 2022, 15:46 IST
ಈಚೆಗೆ ನಿವೃತ್ತರಾದ ಯೋಧ ಮೇಜರ್‌ ವಿಜಯಚಂದ್ರ ಅವರನ್ನು ಕಾಂಗ್ರೆಸ್‌ ಪಕ್ಷದ ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು. ಪಕ್ಷದ ಮುಖಂಡರಾದ ಜೆ.ಆರ್‌.ಲೋಬೊ, ಅಬ್ದುಲ್ ಸಲೀಂ,  ಅಶ್ರಫ್ ಬಜಾಲ್,  ಭರತೇಶ್ ಅಮೀನ್, ಟಿ.ಕೆ.ಸುಧೀರ್, ಚಂದ್ರಕಲಾ ಜೋಗಿ, ಜ್ಯೋತಿ ಅಶೋಕ್, ಮೇಸಿ ಡಿಸೋಜಾ, ನರೇಶ್ ಕುಮಾರ್, ಹರಿಪ್ರಸಾದ್, ಆಸೀಫ್ ಬಜಾಲ್, ಕೃತಿನ್ ಕುಮಾರ್, ಶಾನ್ ಡಿಸೋಜಾ, ಆಸೀಫ್ ಜೆಪ್ಪು, ಲಕ್ಷ್ಮಣ್ ಶೆಟ್ಟಿ ಹಾಗೂ ಇತರರು ಇದ್ದಾರೆ

ಮಂಗಳೂರು: ಭಾರತೀಯ ಸೇನಾ ಪಡೆಯಲ್ಲಿ 13 ವರ್ಷ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಬಜಾಲ್ ವೀರನಗರದ ಯೋಧ, ಮೇಜರ್ ವಿಜಯಚಂದ್ರ ಅವರನ್ನು ಕಾಂಗ್ರೆಸ್‌ ಮುಖಂಡರು ಮಂಗಳವಾರ ಸನ್ಮಾನಿಸಿದರು.

ವಿಜಯಚಂದ್ರ ಅವರು ನಿವೃತ್ತಿಗೂ ಮುನ್ನ ಅಸ್ಸಾಂನ ರೆಜಿಮೆಂಟ್ ಆಫ್ ಆರ್ಟಿಲ್ಲರಿಯಲ್ಲಿ ಮೇಜರ್ ಹುದ್ದೆಯಲ್ಲಿದ್ದರು. ನಿವೃತ್ತಿ ಬಳಿಕ ಅವರು ವೀರನಗರದಲ್ಲೇ ನೆಲೆಸಿದ್ದಾರೆ.

ಕಾಂಗ್ರೆಸ್‌ ಮುಖಂಡ ಜೆ.ಆರ್‌.ಲೋಬೊ ಮಾತನಾಡಿ, ‘ಮೇಜರ್ ವಿಜಯಚಂದ್ರ ಅವರು ಕಠಿಣ ಹಿಮಪಾತ ಉಂಟಾಗುವ ಕಡಿದಾದ ಪ್ರದೇಶಗಳಾದ ಜಮ್ಮು, ಲಡಾಖ್, ಲೇಹ್ ಹಾಗೂ ಅಸ್ಸಾಂನ ವಿವಿಧ ಕಡೆಗಳಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸಾಮಾನ್ಯ ಜನರು ಇಂತಹ ಪ್ರದೇಶಗಳ್ಲಲಿ ಜೀವನ ಸಾಗಿಸುವುದೇ ಕಷ್ಟ. ಇಂತಹ ಕ್ಲಿಷ್ಟಕರ ವಾತಾವರಣದಲ್ಲೂ ತಮ್ಮ ಆರೋಗ್ಯ ಲೆಕ್ಕಿಸದೇ ದೇಶಕ್ಕಾಗಿ ಸೇವೆ ಸಲ್ಲಿಸಿದ ವಿಜಯಚಂದ್ರ ಅವರು ಇಂದಿನ ಯುವಕರಿಗೆ ಪ್ರೇರಣೆ. ಅವರ ಕುಟುಂಬದ ಇಬ್ಬರು ಸಹೋದರರು ಸೇನೆಯಲ್ಲಿ ಕೆಲಸ ಮಾಡಿದ್ದಾರೆ’ ಎಂದರು.

ADVERTISEMENT

ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಂ, ಪಾಲಿಕೆ ಸದಸ್ಯ ಅಶ್ರಫ್ ಬಜಾಲ್, ಪಕ್ಷದ ಮುಖಂಡರಾದ ಭರತೇಶ್ ಅಮೀನ್, ಟಿ.ಕೆ.ಸುಧೀರ್, ಚಂದ್ರಕಲಾ ಜೋಗಿ, ಜ್ಯೋತಿ ಅಶೋಕ್, ಮೇಸಿ ಡಿಸೋಜಾ, ನರೇಶ್ ಕುಮಾರ್, ಹರಿಪ್ರಸಾದ್, ಆಸೀಫ್ ಬಜಾಲ್, ಕೃತಿನ್ ಕುಮಾರ್, ಶಾನ್ ಡಿಸೋಜಾ, ಆಸೀಫ್ ಜೆಪ್ಪು, ಲಕ್ಷ್ಮಣ್ ಶೆಟ್ಟಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.