ಮುಡಿಪು: ಭಕ್ತಿ, ಶ್ರದ್ಧೆಯ ಮೂಲಕ ನಾವು ಧರ್ಮಾಚರಣೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಹೇಳಿದರು.
ಅಸೈಗೋಳಿಯ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಸೈಗೋಳಿ, ಅಯ್ಯಪ್ಪ ಸ್ವಾಮಿ ಸೇವಾ ಭಜನಾ ಮಂಡಳಿ, ಅಸೈಗೋಳಿ, ಪರಂಜ್ಯೋತಿ ಮಾತೃ ಮಂಡಳಿ ಅಸೈಗೋಳಿ, ಸಂಧ್ಯಾ ಭಜನೋತ್ಸವ ಸಮಿತಿ ಅಸೈಗೋಳಿ ಆಶ್ರಯದಲ್ಲಿ 48 ದಿನಗಳ ಸಂಧ್ಯಾ ಭಜನಾ ಸಂಕೀರ್ತನೆ ಉದ್ಘಾಟಿಸಿ ಅವರು ಮಾತನಾಡಿದರು.
ಗುಳಿಗ ಕೊರಗಜ್ಜ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿ ರೈ ಪಜೀರು ಮಾತನಾಡಿ, ದೇವಾಲಯದಲ್ಲಿ ನಿರಂತರ ಭಜನೆ, ಭಗವಂತನ ನಾಮ ಸಂಕೀರ್ತನೆ ಮಾಡಿದರೆ ಆ ಸಾನ್ನಿಧ್ಯ ಬೆಳಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಅಯ್ಯಪ್ಪ ಸ್ವಾಮಿ ಸಂಧ್ಯಾ ಭಜನಾ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯ್ಕ್ ವಹಿಸಿದ್ದರು.
ಗೌರವಾಧ್ಯಕ್ಷರಾದ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಮುಖಂಡರಾದ ಪ್ರವೀಣ್ ಅಮೀನ್ ಅಸೈಗೋಳಿ ಸೈಟ್, ಸುರೇಶ್ ಅಸೈ, ಮಂಜುನಾಥ ಆಳ್ವ ತೇವುನಾಡುಗುತ್ತು, ಹಿರಿಯರಾದ ಸುರೇಶ್ ರೈ ಕಕ್ಕೆಮಜಲು, ಟ್ರಸ್ಟಿಗಳಾದ ರಮೇಶ್ ರೈ ಕೆಳಗಿನ ಮನೆ, ಚಂದ್ರಶೇಖರ್ ಶೆಟ್ಟಿ ಮಂಟಮೆ, ಟ್ರಸ್ಟಿ ಸುಧಾಕರ ನಾಯಕ್, ಪರಂಜ್ಯೋತಿ ಮಾತೃ ಮಂಡಳಿ ಅಧ್ಯಕ್ಷೆ ನಾಗವೇಣಿ ಶೆಟ್ಟಿ ಭಾಗವಹಿಸಿದ್ದರು.
ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಪುಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸೇವಾ ಟ್ರಸ್ಟ್ ಕೋಶಾಧಿಕಾರಿ ಆನಂದ ಅಸೈಗೋಳಿ ಸ್ವಾಗತಿಸಿದರು. ಸಂಧ್ಯಾ ಭಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ತ್ಯಾಗಂ ಹರೇಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.