ಉಪ್ಪಿನಂಗಡಿ: ಇಲ್ಲಿನ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ವ್ಯಕ್ತಗೊಂಡ ಸಲಹೆಯ ಪ್ರಕಾರ ಪ್ರಾಯಶ್ಚಿತ್ತ ಸಂಬಂಧಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಗೆ ಗುರುವಾರ ಚಾಲನೆ ನೀಡಲಾಗಿದ್ದು, ದೇವಳದಲ್ಲಿ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ದುರ್ಗಾ ಪೂಜೆ ನೆರವೇರಿತು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ಸಮಿತಿ ಸದಸ್ಯರಾದ ಕೃಷ್ಠ ರಾವ್ ಅರ್ತಲ, ವೆಂಕಪ್ಪ ಪೂಜಾರಿ, ದೇವಿದಾಸ್ ರೈ, ಡಾ.ರಮ್ಯ ರಾಜಾರಾಮ್, ಅನಿತಾ ಕೇಶವಗೌಡ, ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಸ್ಥಳೀಯ ಪ್ರಮುಖರಾದ ಮಾಧವಿ ರೈ, ಯೋಗೀಶ್ ಕಡ್ತಿಲ, ಗುಣಕರ ಅಗ್ನಾಡಿ, ಕೈಲಾರ್ ರಾಜಗೋಪಾಲ ಭಟ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.