ADVERTISEMENT

ಸಮಸ್ತದಿಂದ ಧಾರ್ಮಿಕ, ಲೌಕಿಕ ಶಿಕ್ಷಣಕ್ಕೆ ಆದ್ಯತೆ: ಉಸ್ಮಾನ್ ಫೈಝಿ ತೋಡಾರ್

ಆತೂರು: ಸೀರತುಲ್ ರಸೂಲ್, ಸನದು ದಾನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 2:38 IST
Last Updated 27 ಸೆಪ್ಟೆಂಬರ್ 2025, 2:38 IST
ಉಪ್ಪಿನಂಗಡಿ ಸಮೀಪದ ಆತೂರು ಬದ್ರಿಯಾ, ಅಲ್ಬಿರ್ರ್ ಶಾಲೆಯಲ್ಲಿ ಸೀರತ್‌ಉಲ್‌ ರಸೂಲ್, ಸನದು ದಾನ ನಡೆಯಿತು
ಉಪ್ಪಿನಂಗಡಿ ಸಮೀಪದ ಆತೂರು ಬದ್ರಿಯಾ, ಅಲ್ಬಿರ್ರ್ ಶಾಲೆಯಲ್ಲಿ ಸೀರತ್‌ಉಲ್‌ ರಸೂಲ್, ಸನದು ದಾನ ನಡೆಯಿತು   

ಉಪ್ಪಿನಂಗಡಿ: ಮುಂದಿನ ವರ್ಷ ಸಮಸ್ತ ಸಂಸ್ಥೆ 100ನೇ ವಾರ್ಷಿಕ ಆಚರಿಸಲಿದ್ದು, ಈ ಸಂಬಂಧ ಸಂಸ್ಥೆ ವತಿಯಿಂದ ಆಧುನಿಕ ವ್ಯವಸ್ಥೆಗೆ ತಕ್ಕುದಾಗಿ ಶಿಕ್ಷಣ ವ್ಯವಸ್ಥೆಯನ್ನು ವಿಶಿಷ್ಟವಾಗಿ ಬದಲಾವಣೆ ಮಾಡಲಾಗಿದೆ ಎಂದು ಸಮಸ್ತ ಕೇರಳ ಜಂಇಯ್ಯತ್‌ಉಲ್‌ ಮುಅಲ್ಲಿಮೀನ್ ಕೇಂದ್ರ ಸಮಿತಿ ಸದಸ್ಯ ಉಸ್ಮಾನ್ ಫೈಝಿ ತೋಡಾರ್ ಹೇಳಿದರು.

ಆತೂರು ಅಲ್ಬಿರ್ರ್ ಶಾಲೆ ವಿದ್ಯಾರ್ಥಿಗಳ ಪ್ರಥಮ ವರ್ಷದ ಸನದು ದಾನ ಮತ್ತು ಬದ್ರಿಯಾ ಸ್ಕೂಲ್ ವತಿಯಿಂದ ಹಮ್ಮಿಕೊಳ್ಳಲಾದ ಸೀರತ್‌ಉಲ್‌ ರಸೂಲ್-ಮೀಲಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧಾರ್ಮಿಕ ಶಿಕ್ಷಣದ ಜತೆಗೆ ಲೌಕಿಕ ಶಿಕ್ಷಣ ಒಳಗೊಂಡ ಅಲ್ಬಿರ್ರ್ ಶಾಲೆಗಳನ್ನು ಹುಟ್ಟು ಹಾಕಿದ್ದು, ಈ ಸಂಸ್ಥೆ ಎರಡೂ ಶಿಕ್ಷಣಕ್ಕೆ ಒತ್ತುಕೊಡುವ ಕೆಲಸ ಮಾಡಲಿದೆ. ಪ್ರವಾದಿ ಮುಹಮ್ಮದ್ ಮುಸ್ತಫಾ ಅವರ 1500ನೇ ಜನ್ಮ ದಿನಬಾಚರಣೆಯ ಈ ದಿನಗಳಲ್ಲಿ ನಮ್ಮ ಸಮಸ್ತ ಸಂಸ್ಥೆ 100 ವರ್ಷಗಳನ್ನು ಪೂರೈಸುತ್ತಿರುವ ಬಗ್ಗೆ ಹೆಮ್ಮೆಯಾಗುತ್ತಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಪ್ರವಾದಿಯವರ ಪ್ರೀತಿ ಗಳಿಸುವ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.

ADVERTISEMENT

ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸ‌ಯ್ಯದ್ ಜುನೈದ್ ಜಿಫ್ರಿ ತಂಙಳ್ ಮಾತನಾಡಿ, ಮಕ್ಕಳಿಗೆ ಧಾರ್ಮಿಕ ಚೌಕಟ್ಟಿನೊಂದಿಗೆ ಸಂಸ್ಕಾರವನ್ನೂ ತಿಳಿಹೇಳಬೇಕು. ಅಹ್ಲುಸುನ್ನತ್ ಆಶಯಗಳಿಗೆ ಬದ್ಧರಾಗುವಂತೆ ನೋಡಿಕೊಳ್ಳಬೇಕು ಎಂದರು.

ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹಮದ್ ಕುಂಞಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೆಮ್ಮಾರ ಮಸೀದಿ ಖತೀಬ್ ಆದಂ ಅಹ್ಸನಿ, ಬದ್ರಿಯಾ ಮದ್ರಸದ ಮುಖ್ಯ ಶಿಕ್ಷಕ ಹಂಝ ಸಖಾಫಿ, ಬದ್ರಿಯಾ ಸ್ಕೂಲ್ ಪ್ರಾಂಶುಪಾಲ ಅಬ್ದುಲ್ ಸಮದ್ ಅನ್ಸಾರಿ ಮಾತನಾಡಿದರು.

ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಆಶಿಫ್ ಅಝ್ಹರಿ, ತದ್ಬೀರುಲ್ ಇಸ್ಲಾಂ ಮದ್ರಸದ ಮುಖ್ಯ ಶಿಕ್ಷಕ ಸತ್ತಾರ್ ಅಸ್ನವಿ, ನೀರಾಜೆ ಮದ್ರಸದ ಶೌಕತ್‌ಅಲಿ ಅಸ್ಲಮಿ, ಅಧ್ಯಕ್ಷ ಎನ್.ಸಿದ್ದಿಕ್, ಸಂಘ ಸಂಸ್ಥೆ ಪದಾಧಿಕಾರಿಗಳಾದ ಬಿ.ಕೆ.ಅಬ್ದುಲ್ ರಜಾಕ್, ಅಜೀಝ್ ಕಿಡ್ಸ್, ಜಿ.ಮಹಮ್ಮದ್ ರಫೀಕ್, ಅಬ್ದುಲ್ ಖಾದರ್, ಬಡಿಲ ಹುಸೈನ್, ಇಬ್ರಾಹಿಂ ಮೋನು, ನೌಫಲ್ ಭಾಗವಹಿಸಿದ್ದರು. ಶಿಕ್ಷಕರಾದ ಅಬೂಬಕ್ಕರ್ ಕೌಸರಿ ಸ್ವಾಗತಿಸಿ, ಅದ್ನಾನ್ ಅನ್ಸಾರಿ ವಂದಿಸಿದರು. ನಿಝಾಮ್ ಅನ್ಸಾರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.