ADVERTISEMENT

ಬಂಟ್ಟಾಳ | 7 ಕೋಟಿ ಕಾಡುಹಣ್ಣಿನ ಗಿಡ ನಾಟಿ, ರಕ್ಷಣೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:04 IST
Last Updated 16 ಜುಲೈ 2025, 5:04 IST
<div class="paragraphs"><p>ಸಾಮಾಜಿಕ ಅರಣ್ಯೀಕರಣ ಯೋಜನೆಯಡಿ ಗಿಡ ವಿತರಣೆ, ನಾಟಿ ಕಾರ್ಯಕ್ರಮ ನಡೆಯಿತು</p></div>

ಸಾಮಾಜಿಕ ಅರಣ್ಯೀಕರಣ ಯೋಜನೆಯಡಿ ಗಿಡ ವಿತರಣೆ, ನಾಟಿ ಕಾರ್ಯಕ್ರಮ ನಡೆಯಿತು

   

ಬಂಟ್ವಾಳ: ತಾಲ್ಲೂಕಿನ ಕೊಯಿಲ ಗ್ರಾಮದ ಬಬ್ಬರ್ಯಬೈಲು ದೈವಸ್ಥಾನದ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾಮಾಜಿಕ ಅರಣ್ಯೀಕರಣ ಯೋಜನೆಯಡಿ ಗಿಡ ವಿತರಣೆ ಮತ್ತು ನಾಟಿ ಕಾರ್ಯಕ್ರಮ ಸೋಮವಾರ ನಡೆಯಿತು

ಬಂಟ್ಟಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ವಿವಿಧ ಹಣ್ಣಿನ ಮತ್ತು ಔಷಧೀಯ ಗಿಡಗಳ ನಾಟಿ ಕಾರ್ಯಕ್ರಮ ಸೋಮವಾರ ಇಲ್ಲಿನ ಕೊಯಿಲ ಗ್ರಾಮದ ಬಬ್ಬರ್ಯಬೈಲು ದೈವಸ್ಥಾನದ ಬಳಿ ನಡೆಯಿತು.

ADVERTISEMENT

ನೈಸರ್ಗಿಕ ವಿಪತ್ತಿಗೆ ಅರಣ್ಯ ನಾಶವೇ ಪ್ರಮುಖ ಕಾರಣ ಎಂದು ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್ ಹೇಳಿದರು.

5 ವರ್ಷಗಳಿಂದ ಯೋಜನೆ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ 7 ಕೋಟಿ ಕಾಡುಹಣ್ಣಿನ ಗಿಡಗಳನ್ನು ನೆಟ್ಟು ರಕ್ಷಣೆ ಮಾಡಲಾಗುತ್ತಿದೆ ಎಂದರು.  

ಉಪವಲಯ ಅರಣ್ಯಾಧಿಕಾರಿ ಕೃಷ್ಣ ನಾಯ್ಕ್ ಮಾತನಾಡಿ, ಪ್ರಕೃತಿಯಲ್ಲಿ ಶೇ 33 ರಷ್ಟು ಮರ ಗಿಡಗಳ ಅಗತ್ಯವಿದೆ ಎಂದರು.

ಶೌರ್ಯ ಘಟಕ ಪ್ರತಿನಿಧಿಗಳಿಗೆ ಹಣ್ಣಿನ ಗಿಡ ವಿತರಿಸಲಾಯಿತು.

ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜ, ಸಿದ್ಧಕಟ್ಟೆ ವಲಯ ಅಧ್ಯಕ್ಷ  ಜಗದೀಶ್ ಕೊಯಿಲ,  ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಹರಿಶ್ಚಂದ್ರ ಶೆಟ್ಟಿ ಬಬ್ಬರ್ಯಬೈಲು, ರಾಧಾಕೃಷ್ಣ ಆಚಾರ್ಯ, ಹರ್ಷೇಂದ್ರ ಹೆಗ್ಡೆ, ಶೌರ್ಯ ಸಮಿತಿ ಮಾಸ್ಟರ್ ಪ್ರಕಾಶ್, ಕ್ಯಾಪ್ಟನ್ ಕೃಷ್ಣಪ್ಪ ನಾಯ್ಕ, ಪ್ರವೀಣ್ ಪೂಜಾರಿ, ಸದಾನಂದ ನಾವೂರ, ಶಶಿಧರ ಆಚಾರ್ಯ, ಶಾಲಿನಿ, ಶೌರ್ಯ ಕಾರ್ಯಕ್ರಮದ ಯೋಜನಾಧಿಕಾರಿಗಳಾದ ಜಯವಂತ  ಪಟೆಗಾರ, ಕಿಶೋರ್ ಕುಮಾರ್, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ. ಭಾಗವಹಿಸಿದ್ದರು.

ಬಂಟ್ವಾಳ ತಾಲ್ಲೂಕು ಯೋಜನಾಧಿಕಾರಿ ಜಯಾನಂದ ಪಿ.ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಹರಿಣಾಕ್ಷಿ ವಂದಿಸಿದರು. ಕೃಷಿ ಅಧಿಕಾರಿ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.