ADVERTISEMENT

ಮಂಗಳೂರಿನ ರೋಹನ್ ಕಾರ್ಪೊರೇಷನ್‌ ಸಂಸ್ಥೆಗೆ ಶಾರುಖ್ ಖಾನ್ ಬ್ರ್ಯಾಂಡ್‌ ಅಂಬಾಸಿಡರ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 4:27 IST
Last Updated 13 ಜುಲೈ 2025, 4:27 IST
ರೋಹನ್ ಮೊಂತೇರೊ ಅವರೊಂದಿಗೆ ನಟ ಶಾರುಖ್ ಖಾನ್, ರೋಹನ್ ಕಾರ್ಪೊರೇಷನ್‌ನ ಲೋಗೊ ಪ್ರದರ್ಶಿಸಿದರು
ರೋಹನ್ ಮೊಂತೇರೊ ಅವರೊಂದಿಗೆ ನಟ ಶಾರುಖ್ ಖಾನ್, ರೋಹನ್ ಕಾರ್ಪೊರೇಷನ್‌ನ ಲೋಗೊ ಪ್ರದರ್ಶಿಸಿದರು   

ಮಂಗಳೂರು: ಮಂಗಳೂರಿನ ಹೆಸರಾಂತ ಉದ್ಯಮ ಸಂಸ್ಥೆ ರೋಹನ್ ಕಾರ್ಪೊರೇಷನ್ ತನ್ನ ಅಧಿಕೃತ ಬ್ರ್ಯಾಂಡ್ ಅಂಬಾಸಿಡರ್‌ ಆಗಿ ಬಾಲಿವುಡ್ ನಟ ಶಾರುಖ್ ಖಾನ್‌ ಅವರನ್ನು ಘೋಷಣೆ ಮಾಡಿದೆ.

ಭಾರತ್ ಮಾಲ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ, ವಿಡಿಯೊ ಪರದೆಯ ಮೇಲೆ ಬ್ರ್ಯಾಂಡ್ ಅಂಬಾಸಿಡರ್ ವಿಡಿಯೊ ಪ್ರದರ್ಶಿಸಲಾಯಿತು. ರೋಹನ್ ಕಾರ್ಪೊರೇಷನ್‌ನ ಸ್ಫೂರ್ತಿದಾಯಕ ಪಯಣ ಮತ್ತು ಶಾರೂಖ್‌ ಖಾನ್ ಅವರ ಶ್ರಮ ಮತ್ತು ವ್ಯಕ್ತಿತ್ವದ ಯಶೋಗಾಥೆಗಳು ಈ ವಿಡಿಯೊದಲ್ಲಿ ಬಿಂಬಿತವಾದವು.

ಕರ್ನಾಟಕದಲ್ಲಿ ಮೊದಲ ಬಾರಿಗೆ ಶಾರೂಖ್‌ ಖಾನ್ ಸಂಸ್ಥೆಯೊಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಮೂಲಕ ರೋಹನ್ ಕಾರ್ಪೊರೇಷನ್ ಮಂಗಳೂರು ನಗರವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಎಂದು ತಿಳಿಸಲಾಯಿತು.

ADVERTISEMENT

ಸಂಸ್ಥಾಪಕ ರೋಹನ್ ಮೊಂತೇರೊ ಮಾತನಾಡಿ, ‘ಶಾರೂಖ್‌ ಖಾನ್ ಅವರಂತಹ ಪ್ರಭಾವಿ ವ್ಯಕ್ತಿ ನಮ್ಮ ಜೊತೆಗೆ ಇರುವುದರಿಂದ, ನಮ್ಮ ಯಶಸ್ಸನ್ನು ಇನ್ನೂ ಎತ್ತರಕ್ಕೆ ವಿಸ್ತರಿಸುವ ಆತ್ಮವಿಶ್ವಾಸ ಬಂದಿದೆ. 25ಕ್ಕೂ ಹೆಚ್ಚು ಯಶಸ್ವಿ ಯೋಜನೆಗಳೊಂದಿಗೆ, ರೋಹನ್ ಕಾರ್ಪೊರೇಷನ್ ಒಂದು ಜಾಗತಿಕ ಹಾದಿಗೆ ಕಾಲಿಟ್ಟಿದೆ’ ಎಂದರು. ನಿರೂಪಕಿ ರೀನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.