ADVERTISEMENT

ಆಕರ್ಷಕ ಪಥಸಂಚಲನ; ಕ್ರೀಡೆಯ ರೋಮಾಂಚನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 4:23 IST
Last Updated 24 ನವೆಂಬರ್ 2022, 4:23 IST
ಕ್ರೀಡಾಕೂಟದ ರಿಲೆಯಲ್ಲಿ ಅಂತಿಮ ಗೆರೆಯತ್ತ ಮುನ್ನುಗ್ಗಿದ ಬಾಲಕಿಯರು
ಕ್ರೀಡಾಕೂಟದ ರಿಲೆಯಲ್ಲಿ ಅಂತಿಮ ಗೆರೆಯತ್ತ ಮುನ್ನುಗ್ಗಿದ ಬಾಲಕಿಯರು   

ಮಂಗಳೂರು: ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಕೇಶವಮೂರ್ತಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ‘ಕ್ರೀಡಾಪಟುಗಳು ಮನಸ್ಸನ್ನು ಸದೃಢವಾಗಿಸಿಕೊಳ್ಳಬೇಕು. ವೈಫಲ್ಯವನ್ನು ಕೂಡ ಪರಿಶ್ರಮದಿಂದ ಸಾಧನೆಯಾಗಿ ಪರಿವರ್ತಿಸಲು ಸಾಧ್ಯ’ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಆಕರ್ಷಕ ಪಥಸಂಚನದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಾದ ಪ್ರಥಮ ನಾಯ್ಕ್, ದಿಯಾ ಶೆಟ್ಟಿ, ದೇವಿಕಾ ಮತ್ತು ನೂತನ್ ಅವರು ಕ್ರೀಡಾ ಜ್ಯೋತಿ ಬೆಳಗಿಸಿದರು.

ಶಕ್ತಿ ಶಿಕ್ಷಣ ಟ್ರಸ್ಟ್‌ ಕಾರ್ಯದರ್ಶಿ ಸಂಜಿತ್ ನಾಯ್ಕ್‌, ಆಡಳಿತಾಧಿಕಾರಿ ಕೆ.ಸಿ. ನಾಯ್ಕ್‌, ಪಿಯು ಕಾಲೇಜು ಪ್ರಾಂಶುಪಾಲ ಪ್ರಥ್ವಿರಾಜ್, ಕ್ರೀಡಾ ಸಂಯೋಜಕರಾದ ಸುರೇಖಾ, ಮನೋಜ್ ಕುಮಾರ್, ರಾಜೇಶ್ ಖಾರ್ವಿ, ಆಕಾಶ್ ಶೆಟ್ಟಿ ಇದ್ದರು. ವಸತಿ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಕಾಮತ್ ಜಿ ವಂದಿಸಿದರು. ಶಿಫಾಲಿ ಬಿ. ಕರ್ಕೇರ ಪ್ರಾರ್ಥಿಸಿದರು. ಶಿಕ್ಷಕಿ ಅಕ್ಷತಾ ಸುಧೀರ್ ನಿರೂಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.