ADVERTISEMENT

ಮಂಗಳೂರು: ಶಕ್ತಿ ಶಾಲೆಯಲ್ಲಿ ಈಜು ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 16:28 IST
Last Updated 1 ಏಪ್ರಿಲ್ 2022, 16:28 IST
ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಆರಂಭವಾಗಿರುವ ಈಜು ತರಬೇತಿ ಶಿಬಿರದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು.
ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಆರಂಭವಾಗಿರುವ ಈಜು ತರಬೇತಿ ಶಿಬಿರದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು.   

ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜು, ಪೂರ್ವ ಪ್ರಾಥಮಿಕ ಶಾಲೆ ಮತ್ತು ಮಂಗಳ ಸ್ವಿಮ್ಮಿಂಗ್ ಕ್ಲಬ್‍ನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ 21 ದಿನಗಳ ಈಜು ತರಬೇತಿ ಶಿಬಿರವನ್ನು ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ‘ಉತ್ತಮ ಗುರಿ ಹೊಂದಿದರೆ ಸುಲಭವಾಗಿ ಶ್ರೇಷ್ಠತೆಯನ್ನು ತಲುಪಬಹುದು. ಈಜುವುದರಲ್ಲಿ ಮಾತ್ರವಲ್ಲ, ಜೀವನದ ಎಲ್ಲ ಹಂತದಲ್ಲೂ ನಂಬಿಕೆ ಇರಬೇಕು. ಮುಕ್ತ ಮನಸ್ಸು ಹೊಂದಿರಬೇಕು’ ಎಂದರು.

ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ‘ಚಿಕ್ಕ ಮಕ್ಕಳ ಉತ್ಸಾಹವು ಗಮನಾರ್ಹವಾಗಿದೆ ಮತ್ತು ಅವರು ಅದೇ ಉತ್ಸಾಹದಿಂದ ಸಾಧನೆಯ ಮೈಲಿಗಲ್ಲನ್ನು ತಲುಪಬೇಕು’ ಎಂದರು. ಮಂಗಳ ಸ್ವಿಮ್ಮಿಂಗ್ ಕ್ಲಬ್‍ ಕಾರ್ಯದರ್ಶಿ ಶಿವಾನಂದ ಗಟ್ಟಿ ನಿಯಮಗಳ ಮಾಹಿತಿ ನೀಡಿದರು. ಸಂಸ್ಥೆಯ ಈಜು ತರಬೇತುದಾರರಾದ ರಾಜೇಶ್ ಖಾರ್ವಿ, ಕೀರ್ತನ್ ಮತ್ತು ನಯನಾ ಇದ್ದರು. ಕನ್ನಡ ಶಿಕ್ಷಕ ಶರಣಪ್ಪ ನಿರೂಪಿಸಿ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.