ADVERTISEMENT

ಶಿವರಾಮ ಕಾರಂತರ ಹುಟ್ಟುಹಬ್ಬ ಅ.10ಕ್ಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 5:10 IST
Last Updated 9 ಅಕ್ಟೋಬರ್ 2024, 5:10 IST
ಸುದ್ದಿಗೋಷ್ಠಿಯಲ್ಲಿ ಪ್ರದೀಪ ಕುಮಾರ ಕಲ್ಕೂರ ಮಾತನಾಡಿದರು. ಜಾನ್‌ ಚಂದ್ರನ್‌, ವಿಜಯಲಕ್ಷ್ಮೀ ಶೆಟ್ಟಿ, ಜಿ.ಕೆ.ಭಟ್ ಸೇರಾಜೆ, ಜನಾರ್ದನ ಹಂದೆ, ಮಂಜುಳಾ ಶೆಟ್ಟಿ ಹಾಗೂ ಪೂರ್ಣಿಮಾ ಪೇಜಾವರ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಪ್ರದೀಪ ಕುಮಾರ ಕಲ್ಕೂರ ಮಾತನಾಡಿದರು. ಜಾನ್‌ ಚಂದ್ರನ್‌, ವಿಜಯಲಕ್ಷ್ಮೀ ಶೆಟ್ಟಿ, ಜಿ.ಕೆ.ಭಟ್ ಸೇರಾಜೆ, ಜನಾರ್ದನ ಹಂದೆ, ಮಂಜುಳಾ ಶೆಟ್ಟಿ ಹಾಗೂ ಪೂರ್ಣಿಮಾ ಪೇಜಾವರ ಭಾಗವಹಿಸಿದ್ದರು   

ಮಂಗಳೂರು: ಕಲ್ಕೂರ ಪ್ರತಿಷ್ಠಾನವು ಸಾಹಿತಿ ದಿ. ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬ ಸಮಾರಂಭವನ್ನು ನಗರದ ಕೊಡಿಯಾಲಗುತ್ತು ಪತ್ತುಮುಡಿ ಸೌಧದಲ್ಲಿ ಇದೇ 10ರಂದು  ಬೆಳಿಗ್ಗೆ 9.30ಕ್ಕೆ ಆಯೋಜಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಅವರು, ‘ಸಮಾರಂಭವನ್ನು ಪತ್ತುಮುಡಿ ಸೂರ್ಯನಾರಾಯಣ ರಾವ್‌  ಉದ್ಘಾಟಿಸುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರು ವಿದ್ವಾಂಸ ಪ್ರಭಾಕರ ಜೋಶಿ ಅವರಿಗೆ 'ಕಾರಂತ ಪ್ರಶಸ್ತಿ' ಪ್ರದಾನ ಮಾಡುವರು. ಭಾಷಾ ವಿಜ್ಞಾನಿ  ಪ್ರೊ.ಕೆ.ಪಿ.ರಾವ್‌ ಅವರು  ಕಾರಂತರ ಸಂಸ್ಮರಣೆ ಮಾಡಲಿರುವರು.  ಉದ್ಯಮಿ ಹರಿಕೃಷ್ಣ ಪುನರೂರು ಭಾಗವಹಿಸುವರು’ ಎಂದರು.

‘ಕಾರ್ಯಕ್ರಮದಲ್ಲಿ ಗಮಕಿ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅವರಿಗೆ 'ಕಲ್ಕೂರ ಗಮಕ ಸಿರಿ' ಪುರಸ್ಕಾರ ಹಾಗೂ ಬೋಳಾರ ವೆಸ್ಟ್ ಉರ್ದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಜುಡಿತ್ ಸಲ್ದಾನ ಅವರಿಗೆ 'ಕಲ್ಕೂರ ಶಿಕ್ಷಣ ಸಿರಿ' ಪುರಸ್ಕಾರ ಪ್ರದಾನ ಮಾಡಲಿದ್ದೇವೆ. ಪ್ರಬಂಧ ಸ್ಪರ್ಧೆ ಹಾಗೂ ಅಂಚೆ ಕಾರ್ಡಿನಲ್ಲಿ ಕಾರಂತರ ಚಿತ್ರ ರಚನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಿದ್ದೇವೆ’ ಎಂದರು. 

ADVERTISEMENT

ಪ್ರತಿಷ್ಠಾನದ ಜಿ.ಕೆ.ಭಟ್‌ ಸೇರಾಜೆ, ವಿಜಯಲಕ್ಷ್ಮಿ ಶೆಟ್ಟಿ, ಜನಾರ್ದನ ಹಂದೆ, ಪೂರ್ಣಿಮಾ ಪೇಜಾವರ, ಮಂಜುಳಾ ಶೆಟ್ಟಿ, ಜಾನ್‌ ಚಂದ್ರನ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.