ADVERTISEMENT

ಶ್ರೀನಿವಾಸ ವಿವಿ-ಪೆಂಟಗನ್ ಸ್ಪೇಸ್ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 7:26 IST
Last Updated 8 ನವೆಂಬರ್ 2022, 7:26 IST

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯವು ಪೆಂಟಗನ್ ಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ವಿಶೇಷ ಒಪ್ಪಂದಕ್ಕೆ, ಶ್ರೀನಿವಾಸ ವಿವಿಯ ಕುಲಾಧಿಪತಿ ಡಾ.ಸಿಎ ರಾಘವೇಂದ್ರ ರಾವ್ ಅವರ ಉಪಸ್ಥಿತಿಯಲ್ಲಿ ಈಚೆಗೆ ಸಹಿ ಹಾಕಲಾಗಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಸ್.ಐತಾಳ್, ‘ಒಪ್ಪಂದದ ಮೂಲಕ ಫುಲ್‌ಸ್ಟಾಕ್ ಡೆವಲಪ್‌ಮೆಂಟ್ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಉತ್ಪನ್ನ ಆಧಾರಿತ ತರಬೇತಿ ನೀಡಲು ಸಾಧ್ಯವಾಗಲಿದೆ’ ಎಂದರು.

ಈ ಒಪ್ಪಂದವು ಪೂರ್ಣಸ್ಟಾಕ್‌ಗಾಗಿ ವಾರ್ಷಿಕ ಸುಮಾರು ₹ 5 ಲಕ್ಷ ವೇತನದೊಂದಿಗೆ ಮತ್ತು ಬಿ.ಟೆಕ್. ವಿದ್ಯಾರ್ಥಿಗಳಿಗೆ ಉತ್ಪನ್ನ ಆಧಾರಿತ ತರಬೇತಿಗಾಗಿ ಸುಮಾರು ₹ 10 ಲಕ್ಷ ವೇತನದೊಂದಿಗೆ ಉದ್ಯೋಗ ಒದಗಿಸುವ ಭರವಸೆ ನೀಡಿದೆ. ಪೂರ್ಣ ಸ್ಟಾಕ್‌ಗೆ ಕನಿಷ್ಠ ₹ 3.6 ಲಕ್ಷದಿಂದ ₹ 4.6 ಲಕ್ಷ ಸಂಬಳ ಮತ್ತು ಬಿಸಿಎ ಮತ್ತು ಎಂಸಿಎ ವಿದ್ಯಾರ್ಥಿಗಳಿಗೆ ಉತ್ಪನ್ನ ಆಧಾರಿತ ತರಬೇತಿಗಾಗಿ ಕನಿಷ್ಠ ₹ 10 ಲಕ್ಷ ಸಂಬಳ ಒದಗಿಸುವ ಭರವಸೆ ಹೊಂದಿದೆ. 350ರಿಂದ 500 ಗಂಟೆಗಳ ತರಬೇತಿಯನ್ನು ಸುಮಾರು 10 ವರ್ಷಗಳ ಕಾರ್ಪೊರೇಟ್ ಅನುಭವ ಹೊಂದಿರುವ ತಜ್ಞರು ನೀಡಲಿದ್ದಾರೆ ಎಂದು ವಿವರಿಸಿದರು.

ADVERTISEMENT

ಪೆಂಟಗನ್ ಸ್ಪೇಸ್ ಬೆಂಗಳೂರು ಮೂಲದ ಎಡ್-ಟೆಕ್ ಕಂಪೆನಿಯು ಕಳೆದ ಎರಡು ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಮತ್ತು ಪಾಂಡೇಶ್ವರ ಕ್ಯಾಂಪಸ್‌ನ ಬಿ.ಟೆಕ್ ಮತ್ತು ಎಂಸಿಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮತ್ತು ಲೈವ್ ಉದ್ಯಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದಾಗಿ ಒಪ್ಪಂದಕ್ಕೆ ಸಹಿ ಮಾಡಿದೆ ಎಂದರು.

ವಿವಿಯ ರಿಜಿಸ್ಟ್ರಾರ್ ಡಾ.ಅಜಯ್ ಕುಮಾರ್, ಪೆಂಟಗನ್ ಸ್ಪೇಸ್ ಸಿಇಒ ಮತ್ತು ಸಂಸ್ಥಾಪಕ ರವಿಶಂಕರ್ ಆರಾಧ್ಯ, ಪ್ರಧಾನ್ ನಾಚಪ್ಪ, ನಿರ್ದೇಶಕ ಶಶಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.