ADVERTISEMENT

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಳ್ಳಿರಥ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:36 IST
Last Updated 11 ನವೆಂಬರ್ 2025, 4:36 IST
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಳ್ಳಿರಥ ಸಮರ್ಪಣೆ
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಳ್ಳಿರಥ ಸಮರ್ಪಣೆ   

ಸುಬ್ರಹ್ಮಣ್ಯ: ಸುಳ್ಯದ ಎಒಎಲ್‌ಇ ಕಮಿಟಿ ಅಧ್ಯಕ್ಷ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರು ಸೇವಾ ರೂಪದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿರಥ ಸಮರ್ಪಣೆ ಕಾರ್ಯಕ್ರಮ ವೈದಿಕ, ಪೂಜಾ ವಿಧಿವಿಧಾನಗಳೊಂದಿಗೆ ಭಕ್ತಿ, ಸಂಭ್ರಮದಿಂದ ಸೋಮವಾರ ಜರುಗಿತು.

ಭಾನುವಾರ ಸಂಜೆ ದೇವಸ್ಥಾನದಲ್ಲಿ ವಾಸ್ತು ರಕ್ಷೋಘ್ನ ಹೋಮ, ಶುದ್ಧಿ ಕಲಶ, ವಾಸ್ತು ಬಲಿ, ವಾಸ್ತು ಪೂಜೆ ನಡೆಯಿತು. ಸೋಮವಾರ ಬೆಳಿಗ್ಗೆ ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ ನಡೆದುಬಳಿಕ ಪೂರ್ಣಾಹುತಿಗೊಂಡು ದೇವರಿಗೆ ಬೆಳ್ಳಿರಥ ಸಮರ್ಪಿಸಲಾಯಿತು. ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು.

ಬೆಳ್ಳಿರಥ ಸಮರ್ಪಿಸಿದ ಡಾ.ರೇಣುಕಾ ಪ್ರಸಾದ್‌ ಕೆ.ವಿ. ಮತ್ತು ಮನೆಯವರು, ಅಮರಶ್ರೀ ಕುರುಂಜಿ ಕಾಂತಮಂಗಲ ಅವರಿಗೆ ದೇವಸ್ಥಾನದ ವತಿಯಿಂದ ಕೃತಜ್ಞತಾ ಪತ್ರ ನೀಡಲಾಯಿತು.

ADVERTISEMENT

ಡಾ.ಜ್ಯೋತಿ ಆರ್. ಪ್ರಸಾದ್, ಮೌರ್ಯ ಆರ್. ಪ್ರಸಾದ್ ಕುರುಂಜಿ, ಅಭಿಜ್ಞಾ ಗೋಕುಲ್, ಗೋಕುಲ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಮುಖಂಡರಾದ ಬೋಪಯ್ಯ, ಸಂಜೀವ ಮಠಂದೂರು, ವಿನಯ ಗುರೂಜಿ, ವಿಧಾನ ಪರಿಷತ್ ಸಸದ್ಯ ಭೋಜೇಗೌಡ, ಡಾ.ಪ್ರಭಾಕರ ಭಟ್ ಕಲ್ಲಡ್ಕ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ ಇಂಜಾಡಿ, ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾ ಅಧಿಕಾರಿ ಯೇಸುರಾಜ್, ಸಮಿತಿ ಸದಸ್ಯರು, ಮಾಸ್ಟರ್ ಪ್ಲ್ಯಾನ್ ಸಮಿತಿ ಸದಸ್ಯರು, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ, ಬೆಳಗಾವಿ ವಿಟಿಯು ರಿಜಿಸ್ಟ್ರಾರ್ ಉಜ್ವಲ್‌ ಯು.ಜೆ, ರಥಶಿಲ್ಪಿ ರಾಜಗೋಪಾಲಾಚಾರ್ಯ, ಪ್ರಮುಖರಾದ ನಿತ್ಯಾನಂದ ಮುಂಡೋಡಿ, ಎನ್.ಎ. ರಾಮಚಂದ್ರ, ಜಿ. ಕೃಷ್ಣಪ್ಪ, ಎಸ್.ಎನ್. ಮನ್ಮಥ, ದಿನೇಶ್ ಮಡಪ್ಪಾಡಿ, ಪಿ.ಎಸ್. ಗಂಗಾಧರ, ಪಿ.ಸಿ. ಜಯರಾಮ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.