ಮಂಗಳೂರು ವಿವಿ
ಮಂಗಳೂರು: ಕರ್ನಾಟಕ ಸರ್ಕಾರದ ಆದೇಶದಲ್ಲಿ ಸೂಚಿಸಿರುವ ಮಾರ್ಗಸೂಚಿ ಪ್ರಕಾರ ಮಂಗಳೂರು ವಿಶ್ವವಿದ್ಯಾನಿಲಯವು ಪ್ರಸಕ್ತ ವರ್ಷದಿಂದ ಮೂರು ಮೇಜರ್ ವಿಷಯಗಳೊಂದಿಗೆ ಆರು ಸೆಮಿಸ್ಟರ್‌ಗಳ ಸಾಮಾನ್ಯ ಪದವಿ ಮಾದರಿಯನ್ನು ಕಾಲೇಜುಗಳಲ್ಲಿ ಅಳವಡಿಸಲು ನಿರ್ಣಯಿಸಿದೆ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಈವರೆಗೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಲ್ಲಿತ್ತು. ಪ್ರಸ್ತುತ ಸರ್ಕಾರದ ಆದೇಶದಂತೆ ರಾಜ್ಯ ಪಠ್ಯಕ್ರಮ (ಎಸ್‌ಇಪಿ) ಅನುಷ್ಠಾನಗೊಳ್ಳಲಿದೆ. ಈ ಶೈಕ್ಷಣಿಕ ವರ್ಷದಲ್ಲಿ ಪದವಿ ಪ್ರಥಮ ವರ್ಷಕ್ಕೆ ಪ್ರವೇಶಕ್ಕೆ ಈ ಪಠ್ಯಕ್ರಮ ಅನ್ವಯವಾಗಲಿದೆ. ಈಗಾಗಲೇ ಎನ್‌ಇಪಿ ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅದೇ ಪಠ್ಯಕ್ರಮ ಮುಂದುವರಿಯುತ್ತದೆ. ಮೂರು ವರ್ಷ ಪೂರ್ಣಗೊಳಿಸಿ ಆನರ್ಸ್ ಮಾಡಲು ಇಚ್ಛಿಸುವವರಿಗೆ ನಾಲ್ಕನೇ ವರ್ಷದ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮಂಗಳೂರು ವಿವಿ ವ್ಯಾಪ್ತಿಯ ಘಟಕ ಕಾಲೇಜುಗಳು, ಸಂಯೋಜಿತ ಕಾಲೇಜುಗಳು ಸೇರಿ ಎಲ್ಲ 187 ಕಾಲೇಜುಗಳಲ್ಲಿ ಎನ್‌ಇಪಿ ಪಠ್ಯಕ್ರಮ ಜಾರಿಯಾಗಲಿದೆ ಎಂದು ವಿವಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.