ADVERTISEMENT

ಪಿಲಿಚಂಡಿಕಲ್ಲು ಸರ್ಕಾರಿ ಶಾಲೆಯ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 15:01 IST
Last Updated 14 ಫೆಬ್ರುವರಿ 2023, 15:01 IST
ಬೆಳ್ತಂಗಡಿಯ ಪಿಲಿಚಂಡಿಕಲ್ಲು ಶಾಲೆಯ ಸ್ಮಾರ್ಟ್ ಕ್ಲಾಸ್
ಬೆಳ್ತಂಗಡಿಯ ಪಿಲಿಚಂಡಿಕಲ್ಲು ಶಾಲೆಯ ಸ್ಮಾರ್ಟ್ ಕ್ಲಾಸ್   

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಚಂಡಿಕಲ್ಲು ಇಲ್ಲಿನ ಸ್ಮಾರ್ಟ್ ಕ್ಲಾಸ್‌ ಅನ್ನು ಉದ್ಯಮಿ ಶಶಿಧರ ಶೆಟ್ಟಿ ಬರೋಡ ಇವರ ತಾಯಿ ಕಾಶಿ ಶೆಟ್ಟಿ ಉದ್ಘಾಟಿಸಿದರು.

ವಿನೂತನ ಶೈಲಿಯ, ಆಕರ್ಷಕ ಸ್ಮಾರ್ಟ್ ಕ್ಲಾಸ್‌ಗೆ ಬೇಕಾದ ಉಪಕರಣ ಖರೀದಿಸಲು ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ನವಶಕ್ತಿ ಗುರುವಾಯನಕೆರೆ ಅವರು ₹ 4 ಲಕ್ಷ ದೇಣಿಗೆ ಶಾಲೆಗೆ ನೀಡಿದ್ದಾರೆ.

ಸ್ಮಾರ್ಟ್ ಕ್ಲಾಸ್ ಗೋಡೆ ತುಂಬೆಲ್ಲಾ ಸುಂದರ ಪರಿಸರ, ಪ್ರಾಣಿ, ಪಕ್ಷಿ, ಆಕಾಶ, ಕಾಮನಬಿಲ್ಲು ಜಲಚರಗಳ ಚಿತ್ರಗಳನ್ನು ರಾಜ್ಯ ಪ್ರಶಸ್ತಿ ವಿಜೇತ ಧನುಷ್ ಹೆಗ್ಡೆ ವೇಣೂರು ಆಕರ್ಷಕವಾಗಿ ಬಿಡಿಸಿದ್ದು, ಅವರನ್ನು ಶಶಿಧರ್ ಶೆಟ್ಟಿ ಗೌರವಿಸಿದರು.

ADVERTISEMENT

ಶಾಲೆಯ ಪರವಾಗಿ ಕಾಶಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಸದಸ್ಯ ಹೇಮಂತ್ ಶೆಟ್ಟಿ, ಮಮತಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಹಕೀಂ, ಉಪಾಧ್ಯಕ್ಷೆ ಲಲಿತಾ ಚಿದಾನಂದ್, ಶಾಲಾ ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಇದ್ದರು.

ಮುಖ್ಯಶಿಕ್ಷಕ ನಾಗಪ್ಪ ಡಿ. ಸ್ವಾಗತಿಸಿ, ದೈಹಿಕ ಶಿಕ್ಷಕಿ ಅನಿತಾ ಕೆ. ವಂದಿಸಿದರು.

ಶಿಕ್ಷಕಿ ಕುಸುಮಾ ಕೆ. ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.