ADVERTISEMENT

ಮಂಗಳೂರು | ಕೃಷ್ಣನ ತೊಟ್ಟಿಲು ತೂಗಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:05 IST
Last Updated 16 ಆಗಸ್ಟ್ 2025, 7:05 IST
ಮಂಗಳೂರಿನ ಚೇತನಾ ಶಾಲೆಯ ಶಿಕ್ಷಕಿಯರು ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಮಾಡಿದರು
ಮಂಗಳೂರಿನ ಚೇತನಾ ಶಾಲೆಯ ಶಿಕ್ಷಕಿಯರು ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಮಾಡಿದರು   

ಮಂಗಳೂರು: ವಿಶೇಷ ಮಕ್ಕಳ ಶಾಲೆ, ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.

ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಕೃಷ್ಣಸ್ತೋತ್ರ ಮತ್ತು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಪೂಜೆ ಹಾಗೂ ಆರತಿ ಬೆಳಗಲಾಯಿತು. ಕೃಷ್ಣನ ವಿಗ್ರಹವನ್ನು ತೊಟ್ಟಿಲಲ್ಲಿ ಕೂರಿಸಿ ತೂಗುವ ಮೂಲಕ ಮಕ್ಕಳು ಸಂಭ್ರಮಿಸಿದರು. ಮಕ್ಕಳು ರಾಧಾ, ಕೃಷ್ಣರ ವೇಷ ಧರಿಸಿ ಕಂಗೊಳಿಸಿದರು. ಮಕ್ಕಳಿಂದ ಹುಲಿ– ದನ ಆಟ ಮತ್ತು ಮಡಿಕೆ ಒಡೆಯುವ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್, ಸೇವಾಭಾರತಿ ಮಂಗಳೂರಿನ ಗೌರವ ಕಾರ್ಯದರ್ಶಿ ಎಚ್. ನಾಗರಾಜ ಭಟ್, ಕೋಶಾಧಿಕಾರಿ ವಿನೋದ್ ಶೆಣೈ, ಮುಖ್ಯ ಶಿಕ್ಷಕಿ ಸುಪ್ರೀತಾ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.