ಆನವಟ್ಟಿ: ಬಾಲಿಕಾ ಪ್ರೌಢಶಾಲೆ ಆಂಗ್ಲ ಮಾಧ್ಯಮ ಶೇ 100ರ ಸಾಧನೆ
ಕಾಸರಗೋಡು: ಕೇರಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾಸರಗೋಡು ಜಿಲ್ಲೆಗೆ ಶೇ 99.57 ಫಲಿತಾಂಶ ಬಂದಿದೆ.
ಒಟ್ಟು 20,436 ಮಂದಿ ಮಕ್ಕಳು ತೇರ್ಗಡೆಯಾಗಿದ್ದು, ಈ ಪೈಕಿ 10,742 ಮಂದಿ ಹುಡುಗರು, 9,606 ಮಂದಿ ಹುಡುಗಿಯರು ಇದ್ದಾರೆ.
ಜಿಲ್ಲೆಯಲ್ಲಿ 80 ಸರ್ಕಾರಿ ಶಾಲೆಗಳೂ ಸೇರಿ 133 ಶಾಲೆಗಳಿಗೆ ಶೇ 100 ಫಲಿತಾಂಶ ಲಭಿಸಿದೆ. ಉಳಿದ 34 ಶಾಲೆಗಳಲ್ಲಿ 24 ಅನುದಾನ ರಹಿತ ಶಾಲೆಗಳಾಗಿವೆ. 2,442 ಮಂದಿ ಮಕ್ಕಳು ಎಲ್ಲ ವಿಷಯಗಳಲ್ಲಿ ‘ಎ’ ಶ್ರೇಣಿ ಪಡೆದಿದ್ದಾರೆ. ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ 8 ಪ್ರಿ ಮೆಟ್ರಿಕ್ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಶೇ 100 ಫಲಿತಾಂಶ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.