ADVERTISEMENT

ಕಾಸರಗೋಡು | ರೈಲಿಗೆ ಕಲ್ಲು: ತನಿಖೆ ಚುರುಕುಗೊಳಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 13:00 IST
Last Updated 22 ಆಗಸ್ಟ್ 2023, 13:00 IST
ಕಾಞಂಗಾಡು ರೈಲುಹಳಿಯಲ್ಲಿ ಡಿ.ವೈ.ಎಸ್.ಪಿ. ಪಿ.ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆ. 
ಕಾಞಂಗಾಡು ರೈಲುಹಳಿಯಲ್ಲಿ ಡಿ.ವೈ.ಎಸ್.ಪಿ. ಪಿ.ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆ.    

ಕಾಸರಗೋಡು: ಕಾಞಂಗಾಡು ನಿಲ್ದಾಣ ಬಳಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ ಪರಿಣಾಮ ಕಿಟಿಕಿ ಗಾಜುಗಳು ಪುಡಿಯಾಗಿವೆ.

ಸೋಮವಾರ ಮಧ್ಯಾಹ್ನ 3.48ರ ವೇಳೆಗೆ ಕಲ್ಲುತೂರಾಟ ನಡೆದಿದೆ. ಈ ಸಂಬಂಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾಞಂಗಾಡು ಡಿವೈಎಸ್‌ಪಿ ಪಿ.ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ರೈಲುಹಳಿಯ ಬಳಿ ಶಂಕಾಸ್ಪದ ರೀತಿ ಕಂಡು ಬಂದ 50 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ರೈಲುಗಾಡಿಗಳಲ್ಲೂ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.