
ಮಂಗಳೂರು: ‘ಬಿ.ಆರ್.ಅಂಬೇಡ್ಕರ್ ಸಂವಿಧಾನ ಶಿಲ್ಪಿ ಮಾತ್ರವಲ್ಲ. ಅವರೊಬ್ಬ ತತ್ವಜ್ಞಾನಿ ಮತ್ತು ದೂರದೃಷ್ಟಿ ಹೊಂದಿದ್ದ ಅರ್ಥಶಾಸ್ತ್ರಜ್ಞ. ಅವರ ಚಿಂತನೆಯಿಂದ ಮಾತ್ರ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ’ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ (ಸಿಐಟಿಯು) ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆಗಳಿಂದಾಗಿ ದುರ್ಬಲ ವರ್ಗದವರೂ ಸ್ವಾಭಿಮಾನದಿಂದ ಬದುಕುವಂತಾಗಿದೆ. ಅವರ ಚಿಂತನೆಯ ಆಧಾರದಲ್ಲಿ ದೇಶದಲ್ಲಿ ಪ್ರಬಲ ಚಳವಳಿಯನ್ನು ಕಟ್ಟಬೇಕಿದೆ’ ಎಂದರು.
ಸಂಘದ ಪ್ರಮುಖರಾದ ಮುಜಾಫರ್ ಅಹ್ಮದ್, ಎಂ.ಶಿವಪ್ಪ, ಹಸನ್ ಕುದ್ರೋಳಿ, ವಿಜಯ ಜೈನ್, ಮುತ್ತುರಾಜ್, ರಫಿಕ್, ಹಸನ್ ಕುದ್ರೋಳಿ ಅಬ್ದುಲ್ ಖಾದರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.