ಸುಬ್ರಹ್ಮಣ್ಯ: ಚಪ್ಪಲಿ ಕಳ್ಳತನವನ್ನೇ ‘ವೃತ್ತಿ‘ ಮಾಡಿಕೊಂಡಿದ್ದವನೊಬ್ಬನನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಬಳಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ದೇವಾಲಯದ ಚಪ್ಪಲಿ ಸ್ಟಾಂಡ್‌ನಲ್ಲಿ ಇರಿಸುತ್ತಿದ್ದ ಚಪ್ಪಲಿಗಳು ಆಗಾಗ ಕಳ್ಳತನವಾಗಿ ಕರ್ತವ್ಯದಲ್ಲಿದ್ದ ನೌಕರರೊಂದಿಗೆ ಭಕ್ತರು ಜಗಳ ಮಾಡುತಿದ್ದರು. ಚಪ್ಪಲಿ ಸ್ಟ್ಯಾಂಡ್ ಉಚಿತವಾದ ಕಾರಣ ಭಕ್ತರು ಅವರ ಚಪ್ಪಲಿಯನ್ನು ಇಟ್ಟು ವಾಪಸ್ ತೆಗೆದುಕೊಳ್ಳುವ ವ್ಯವಸ್ಥೆ ಇಲ್ಲಿತ್ತು. ಆದರೆ ಚಪ್ಪಲಿ ಇಲ್ಲಿಟ್ಟು ಹೋದರೆ ಕಾಣೆಯಾಗುತ್ತಿತ್ತು.
ಅಪರಿಚಿತ ಯುವಕನೊಬ್ಬ ಸ್ಟ್ಯಾಂಡ್ ಒಳಗೆ ಇರುವುದನ್ನು ಗಮನಿಸಿ ಅವನನ್ನು ಹಿಡಿದು ವಿಚಾರಿಸಲಾಗಿದೆ. ಕದ್ದ ಚಪ್ಪಲಿ ಸಮೇತ ಯುವಕನನ್ನು ಹಿಡಿದು ಸುಬ್ರಹ್ಮಣ್ಯ ಪೋಲಿಸರಿಗೆ ಒಪ್ಪಿಸಲಾಗಿದೆ. ನೌಕರರು ಬೆಳಿಗ್ಗೆ ಕರ್ತವ್ಯಕ್ಕೆ ಬರುವ ಮೊದಲೇ ಸ್ಟ್ಯಾಂಡ್‌ಗೆ ಬಂದು ಈತ ಬೆಲೆ ಬಾಳುವ ಚಪ್ಪಲಿ ಕಳ್ಳತನ ಮಾಡುತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನೀಡಿದ ದೂರಿನಂತೆ ತನಿಖೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.