ADVERTISEMENT

ದಕ್ಷಿಣ ಕನ್ನಡ: ಕುಮಾರಧಾರ ನದಿಯಲ್ಲಿ ಮೂರು ದಿನಗಳಿಂದ ತೇಲುತಿದ್ದ ದನದ ಮೃತ ದೇಹ

ಮೊಸಳೆ ಹಿಡಿದು ಸತ್ತಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 6:43 IST
Last Updated 28 ಫೆಬ್ರುವರಿ 2024, 6:43 IST
   

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕುಮಾರಧಾರ ನದಿಯಲ್ಲಿ ದನದ ಮೃತದೇಹ ಪತ್ತೆಯಾಗಿದೆ.‌ ಮೊಸಳೆ ಬಾಯಿಗೆ ಸಿಲುಕಿ ದನ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸುಬ್ರಹ್ಮಣ್ಯದ ಕುಮಾರಧಾರ ಸ್ಥಾನಘಟ್ಟದ ಬಳಿ ಮೂರು ದಿನಗಳಿಂದ ದನದ ಮೃತದೇಹ ತೇಲುತ್ತಿತ್ತು. ಇದನ್ನು ಗಮನಿಸಿದ್ದ ಸ್ಥಳೀಯರು ಸ್ಥಳಿಯಾಡಳಿತ ಗಮನಕ್ಕೆ ತಂದಿದ್ದರು. ಆದರೂ ಮೃತದೇಹವನ್ನು ನದಿಯಿಂದ ತೆರವುಗೊಳಿಸಿರಲಿಲ್ಲ. ರವಿ ಕಕ್ಕೆ ಪದವು ಸಮಾಜ ಸೇವಾ ತಂಡದವರು ಮೃತದೇಹವನ್ನು ಬದಿಯಿಂದ ಹೊರ ತೆಗೆದು ದಫನ ಮಾಡಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT