ಸುಹಾಸ್ ಶೆಟ್ಟಿ ಪಾರ್ಥಿವ ಶರೀರವನ್ನು ಕಂಡ ಅವರ ತಂದೆ ಮೋಹನ್ ಬಿಕ್ಕಿ ಬಿಕ್ಕಿ ಅತ್ತರು.
ಮಂಗಳೂರು: ‘ಹಿಂದೂ ಹಿಂದೂ ಎಂದು ಯುವಕರು ಹಿಂದುತ್ವದ ಹಿಂದೆ ಹೋಗುತ್ತಾರೆ. ನಾಳೆ ಇಂತಹ ಅನಾಹುತ ಆದಾಗ ಯಾರೂ ಇರುವುದಿಲ್ಲ. ಕೆಲವು ಹಿಂದುತ್ವ ಸಂಘಟನೆಗಳ ಮುಖಂಡರು ನಾವಿದ್ದೇವೆ ಎಂದು ಈಗ ನಾಲ್ಕೈದು ದಿನ ಬಂದು ಹೋಗುತ್ತಾರೆ. ಅದು ಮಾಡುತ್ತೇವೆ ಇದು ಮಾಡುತ್ತೇವೆ ಎನ್ನುತ್ತಾರೆ. ಎಲ್ಲ ಆದ ಮೇಲೆ ಅವರೂ ಇರುವುದಿಲ್ಲ. ಯಾರೂ ಇರುವುದಿಲ್ಲ’ಎಂದು ಸುಹಾಸ್ ಶೆಟ್ಟಿ ಅವರ ತಂದೆ ಮೋಹನ ಶೆಟ್ಟಿ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡರು.
‘ನಮ್ಮ ಮಗನಿಗೆ 31 ವರ್ಷ. ನಮ್ಮ ಕುಟುಂಬಕ್ಕೆ ಅವನೇ ಆಧಾರ ಸ್ತಂಭವಾಗಿದ್ದ. ಜೀವನ ಪೂರ್ತಿ ಕೊರಗುವವರು ನಾವು’ ಎಂದು ಹೇಳಿದರು.
‘ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ನಿಜ. ಈಗ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದೆ. ಹಾಗಾಗಿ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಹಿಂದೂಗಳಿಗೆ ಭದ್ರತೆ ಇಲ್ಲ’ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.