
ಪ್ರಜಾವಾಣಿ ವಾರ್ತೆಪುತ್ತೂರು: ಮಹಿಳೆಯೊಬ್ಬರು ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರದ ಹೊರವಲಯದ ಮರೀಲು ಸಮೀಪದ ಕಾಡಮನೆ ಎಂಬಲ್ಲಿ ನಡೆದಿದೆ.
ಮರೀಲು ಕಾಡಮನೆ ನಿವಾಸಿ, ಆಟೊ ಚಾಲಕ ಮನೋಜ್ ಅವರ ಪತ್ನಿ ಸಂಧ್ಯಾ (45) ಆತ್ಮಹತ್ಯೆ ಮಾಡಿಕೊಂಡವರು.
ಮನೋಜ್ ಅವರು ರಾತ್ರಿ ವೇಳೆ ನಗರದಲ್ಲಿ ಬಾಡಿಗೆ ರಿಕ್ಷಾ ಓಡಿಸುತ್ತಿದ್ದು, ಬೆಳಿಗ್ಗೆ ಮನೆಗೆ ತೆರಳುತ್ತಿದ್ದರು. ಮನೆಯಲ್ಲಿ ರಾತ್ರಿ ವೇಳೆ ಪತ್ನಿ ಮತ್ತು 13 ವರ್ಷದ ಪುತ್ರ ಮಾತ್ರ ಇರುತ್ತಿದ್ದರು. ಎಂದಿನಂತೆ ಸೋಮವಾರ ರಾತ್ರಿ ಮನೆಯಿಂದ ಬಾಡಿಗೆ ಮಾಡಲು ನಗರಕ್ಕೆ ತೆರಳಿದ್ದ ಮನೋಜ್ ಅವರು ಮಂಗಳವಾರ ಬೆಳಿಗ್ಗೆ ಮನೆಗೆ ಬಂದ ವೇಳೆ ಪತ್ನಿ ಸಂಧ್ಯಾ ಅವರು ಮನೆಯ ಹಾಲ್‌ನ ಕಿಟಿಕಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.