ADVERTISEMENT

ನಾಲ್ಕನೇ ದಿನದ ಧರಣಿಗೆ ಮಹಿಳೆಯರ ಸಾತ್‌

ಸುರತ್ಕಲ್‌ ಟೋಲ್‌ಗೇಟ್‌ ರದ್ಧತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 6:35 IST
Last Updated 1 ನವೆಂಬರ್ 2022, 6:35 IST
ಸುರತ್ಕಲ್‌ ಟೋಲ್‌ಗೇಟ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಧರಣಿಯಲ್ಲಿ ಸೋಮವಾರ ಕಾಂಗ್ರೆಸ್‌ ಮುಖಂಡ ಎಂ.ಎಸ್‌.ಮಹಮ್ಮದ್‌ ಮಾತನಾಡಿದರು. ಪುರುಷೋತ್ತಮ ಚಿತ್ರಾಪುರ, ಮುನೀರ್‌ ಕಾಟಿಪಳ್ಳ, ಶಕುಂತಳಾ ಶೆಟ್ಟಿ, ಬಿ.ಕೆ.ಇಮ್ತಿಯಾಜ್‌ ಇದ್ದಾರೆ
ಸುರತ್ಕಲ್‌ ಟೋಲ್‌ಗೇಟ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಧರಣಿಯಲ್ಲಿ ಸೋಮವಾರ ಕಾಂಗ್ರೆಸ್‌ ಮುಖಂಡ ಎಂ.ಎಸ್‌.ಮಹಮ್ಮದ್‌ ಮಾತನಾಡಿದರು. ಪುರುಷೋತ್ತಮ ಚಿತ್ರಾಪುರ, ಮುನೀರ್‌ ಕಾಟಿಪಳ್ಳ, ಶಕುಂತಳಾ ಶೆಟ್ಟಿ, ಬಿ.ಕೆ.ಇಮ್ತಿಯಾಜ್‌ ಇದ್ದಾರೆ   

ಮಂಗಳೂರು: ಸುರತ್ಕಲ್‌ ಎನ್‌ಐಟಿಕೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಟೋಲ್‌ಗೇಟ್‌ ರದ್ದತಿಗೆ ಒತ್ತಾಯಿಸಿ ನಡೆಯುತ್ತಿರುವ ಹಗಲು– ರಾತ್ರಿ ಧರಣಿ ನಾಲ್ಕನೇ ದಿನವೂ ಸಾಂಗವಾಗಿ ನೆರವೇರಿತು. ಸೋಮವಾರ ರಾತ್ರಿಯ ಧರಣಿಯಲ್ಲಿ ಕಾಂಗ್ರೆಸ್‌ ಮುಖಂಡೆ ಶಕುಂತಳಾ ಶೆಟ್ಟಿ ಹಾಗೂ ಜಿಲ್ಲೆಯ ಮಹಿಳಾ ಹೋರಾಟಗಾರರು ಭಾಗವಹಿಸುವ ಮೂಲಕ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಶಕುಂತಳಾ ಶೆಟ್ಟಿ, ‘ಸುರತ್ಕಲ್‌ನ ಅಕ್ರಮ ಟೋಲ್ ಗೇಟ್ ತೆರವಿನ ವಿಚಾರದಲ್ಲಿ ಬಿಜೆಪಿ ಸರ್ಕಾರದ ಭಂಡತನ ಅಚ್ಚರಿ ಮೂಡಿಸುತ್ತಿದೆ. ಸರ್ಕಾರದ ಸುಲಿಗೆ ನೀತಿಯಿಂದ ಬೇಸತ್ತ ಕರಾವಳಿಯ ಜನ ಆಕ್ರೋಶ ಭರಿತರಾಗಿದ್ದಾರೆ. ಘಟ್ಟದ ತಪ್ಪಲಿನ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲ್ಲೂಕುಗಳ ಜನರೂ ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಘಟ್ಟದ ತಪ್ಪಲು ಹಾಗೂ ಕಡಲತಡಿಯ ಜನರನ್ನು ಬೆಸೆಯುವ ಸಾಧನವಾಗಿ ಈ ಹೋರಾಟ ಪರಿವರ್ತನೆಗೊಂಡಿದೆ’ ಎಂದರು.

ಕಾಂಗ್ರೆಸ್‌ ಮುಖಂಡರಾದ ಅಭಯಚಂದ್ರ ಜೈನ್, ಮೊಯ್ದಿನ್ ಬಾವಾ, ಎಂ.ಎಸ್ ಮಹಮ್ಮದ್, ದಕ್ಷಿನ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಪ್ರಮುಖರಾದ ಬಿ.ಕೆ.ಇಮ್ತಿಯಾಜ್, ಪುರುಷೋತ್ತಮ ಚಿತ್ರಾಪುರ, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಶ್ರೀನಾಥ್ ಕುಲಾಲ್, ರಮೇಶ್ ಟಿ.ಎನ್, ರಾಜೇಶ್ ಪೂಜಾರಿ, ಡಾ.ರಾಜಾರಾಮ್ ಉಪ್ಪಿನಂಗಡಿ, ಮುಹಮ್ಮದ್ ಕುಂಜತ್ತಬೈಲ್, ಆನಂದ ಅಮೀನ್, ಅಕ್ಬರ್ ಅಲಿ ಮುಕ್ಕ, ಹರೀಶ್ ಪೇಜಾವರ ಹಾಗೂ ಇತರರು ಧರಣಿಯಲ್ಲಿ ಭಾಗವಹಿಸಿದರು.

ADVERTISEMENT

ಭಾನುವಾರದ ಧರಣಿಯಲ್ಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್, ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜ, ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಮ್,ಹೋರಾಟಗಾರ್ತಿ ಮಂಜುಳಾ ನಾಯಕ್, ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ, ಯುವ ಕಾಂಗ್ರೆಸ್ ಜಿಲ್ಲಾ ಘಕದ ಅಧ್ಯಕ್ಷ ಲುಕ್ ಮಾನ್ ಬಂಟ್ವಾಳ ಮತ್ತಿತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.