ADVERTISEMENT

ಸ್ವಿಮ್ ಗಾಲ: ವಿ ಒನ್‌ ಚಾಂಪಿಯನ್‌

ರಿಯಾನ, ಅಲಿಟಾಗೆ ತಲಾ 3 ಚಿನ್ನ‌; ಸಾನ್ವಿ, ಯಶ್ವಿ, ರೀಮಾ, ದೇವಿಕಾ, ಶಶಾಂಕ್‌, ಪ್ರದ್ಯುಮ್ನಗೆ ತಲಾ 2 ಚಿನ್ನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:17 IST
Last Updated 15 ಅಕ್ಟೋಬರ್ 2025, 5:17 IST
ಸಮಗ್ರ ಚಾಂಪಿಯನ್ ಆದ ಮಂಗಳೂರಿನ ವಿ ಒನ್ ಕ್ಲಬ್‌ನ ಈಜುಪಟುಗಳು ಆಡಳಿತದವರು ಮತ್ತು ಕೋಚ್‌ಗಳ ಜೊತೆ ಸಂಭ್ರಮಿಸಿದರು
ಸಮಗ್ರ ಚಾಂಪಿಯನ್ ಆದ ಮಂಗಳೂರಿನ ವಿ ಒನ್ ಕ್ಲಬ್‌ನ ಈಜುಪಟುಗಳು ಆಡಳಿತದವರು ಮತ್ತು ಕೋಚ್‌ಗಳ ಜೊತೆ ಸಂಭ್ರಮಿಸಿದರು   

ಮಂಗಳೂರು: ನಗರದ ವಿ ಒನ್ ಈಜು ಕ್ಲಬ್‌, ಭಾನುವಾರ ರಾತ್ರಿ ಇಲ್ಲಿ ಮುಕ್ತಾಯಗೊಂಡ ರಾಜ್ಯಮಟ್ಟದ ಮೆಡಲಿಸ್ಟ್ ಮತ್ತು ನಾನ್ ಮೆಡಲಿಸ್ಟ್‌ಗಳ ಈಜು ಸ್ಪರ್ಧೆ ‘ಸ್ವಿಮ್ ಗಾಲ‘ದ ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಮಂಗಳ ಈಜು ಕ್ಲಬ್ ರನ್ನರ್ ಅಪ್ ಆಯಿತು.

ಮಂಗಳ ಈಜು ಸಂಸ್ಥೆ ಮತ್ತು ಪನಾಮ ಕಾರ್ಪೊರೇಷನ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿ ಒನ್‌ 449 ಪಾಯಿಂಟ್ ಕಲೆ ಹಾಕಿತು. ಕ್ಲಬ್‌ನ ಈಜುಪಟುಗಳು 65 ಚಿನ್ನ, 24 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಬಗಲಿಗೆ ಹಾಕಿಕೊಂಡರು. ವಿವಿಧ ವಿಭಾಗಗಳಲ್ಲಿ ಕ್ಲಬ್‌ನ ರಿಯಾನ ಧೃತಿ ಫರ್ನಾಂಡಿಸ್, ಸಾನ್ವಿ, ಯಶ್ವಿ ಬಿ.ಎಚ್, ಅಲಿಟಾ ಡಿಸೋಜ, ರೀಮಾ ಎ.ಎಸ್ ಮತ್ತು ಪ್ರದ್ಯುಮ್ನ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಪುರುಷ ಮತ್ತು ಬಾಲಕರ ವಿಭಾಗದಲ್ಲಿ ಪ್ರದ್ಯುಮ್ನ 2 ಚಿನ್ನ 1 ಬೆಳ್ಳಿ, ಶಶಾಂಕ್ ಡಿ.ಎಸ್ 2 ಚಿನ್ನ 1 ಕಂಚು, ಸನ್ನಿದು ಉಳ್ಳಾಲ್ 1 ಚಿನ್ನ 1 ಬೆಳ್ಳಿ, ತನಯ್ 1 ಚಿನ್ನ 1 ಕಂಚು, ಸುಧನ್ವ ಶೆಟ್ಟಿ 1 ಚಿನ್ನ, ಅಲಿಸ್ಟರ್ ಸ್ಯಾಮ್ಯುಯೆಲ್ ರೇಗೊ ಮತ್ತು ಅವನೀಶ್ ನಾಯಕ್ ಸುಜೀರ್ ತಲಾ 2 ಬೆಳ್ಳಿ 1 ಕಂಚು, ಸ್ನಿತಿಕ್ ಎನ್ 1 ಬೆಳ್ಳಿ 2 ಕಂಚು, ದಿವಿಜ್ ಕೊಟ್ಟಾರಿ, ನಂದನ್, ನೀಲ್‌ ಎಂ.ಜಿ ಮತ್ತು ಶ್ರೀವತ್ಸ ತಲಾ 1 ಬೆಳ್ಳಿ, ನಂದನ್ ಕರ್ಕೇರ 1 ಕಂಚು ಗೆದ್ದುಕೊಂಡರು.

ADVERTISEMENT

ಬಾಲಕಿಯರ ವಿಭಾಗದಲ್ಲಿ  ರಿಯಾನ ಮತ್ತು ಅಲಿಟಾ ತಲಾ 3 ಚಿನ್ನ, ಸಾನ್ವಿ, ಯಶ್ವಿ ಮತ್ತು ರೀಮಾ ತಲಾ 2 ಚಿನ್ನ ಮತ್ತು 1 ಬೆಳ್ಳಿ, ದೇವಿಕಾ 2 ಚಿನ್ನ, ಶಿಪ್ರ ಶೆಟ್ಟಿ 1 ಚಿನ್ನ 1 ಕಂಚು, ಹಂಸ್ವಿ ಮೆಂಡನ್ 1 ಚಿನ್ನ, ಲಿಪಿಕಾ 1 ಚಿನ್ನ ಮತ್ತು 1 ಕಂಚು, ರೊನಿಕಾ ಮೈರಾ 1 ಚಿನ್ನ, ಸಾರಾ ಎಲಿಷ ಪಿಂಟೊ 3 ಬೆಳ್ಳಿ, ಕುಶಿ ಕುಮಾರ್ 1 ಬೆಳ್ಳಿ, ಪೋಷಿಕ ಒಂದು ಬೆಳ್ಳಿ ಒಂದು ಕಂಚು, ದ್ವಿಶಾ ಶೆಟ್ಟಿ ಮತ್ತು ದಿಯಾ ನಾಯಕ್ ತಲಾ ಒಂದು ಕಂಚು, ನಿಷ್ಕಾ ಸೊನೋರ ಫರ್ನಾಂಡಿಸ್ 1 ಬೆಳ್ಳಿ 1 ಕಂಚು, ಪಂಚಮಿ ನಾಯಕ್ 1 ಕಂಚು, ಪ್ರಕೃತಿ 1 ಬೆಳ್ಳಿ, ಶ್ರಾವ್ಯಾ ಕೆ 1 ಕಂಚು, ಧ್ವನಿ ಅಂಬರ್ 1 ಕಂಚು ಗಳಿಸಿದರು. ಅಲಿಸ್ಟರ್ ರೇಗೊ, ಧೃತಿ ಫರ್ನಾಂಡಿಸ್, ಪ್ರಹ್ಲಾದ್ ಶೆಟ್ಟಿ ಹಾಗೂ ದೇವಿಕಾ ಅವರನ್ನು ಒಳಗೊಂಡ ಮಿಶ್ರ ರಿಲೆ ತಂಡ ಫ್ರೀ ಸ್ಟೈಲ್ ಹಾಗೂ ಮೆಡ್ಲೆಯಲ್ಲಿ ಚಿನ್ನಗೆದ್ದುಕೊಂಡಿತು.

ನವೀನ್ ಹಾಗೂ ರೂಪಾ ಜಿ ಪ್ರಭು ನಿರ್ದೇಶನದಲ್ಲಿ ಕೋಚ್‌ಗಳಾದ ಲೋಕರಾಜ್ ವಿಟ್ಲ, ಅಭಿಲಾಶ್, ಸ್ಕಂದ ಸುಧೀನ್‌ರಾಜ್, ಗಗನ್ ಜಿ.ಪ್ರಭು, ಸಂಜು, ಆರೋಮಲ್ ಮತ್ತು ಪ್ರಣಾಮ್ ಸಂಜಯ್ ಉಳ್ವೇಕರ್ ತರಬೇತಿ ನೀಡಿದ್ದಾರೆ ಎಂದು ಕ್ಲಬ್‌ನ ಪ್ರಕಟಣೆ ತಿಳಿಸಿದೆ.