ADVERTISEMENT

ಟೆಡೆಕ್ಸ್ ಭಾಷಣ ಸರಣಿ

​ಪ್ರಜಾವಾಣಿ ವಾರ್ತೆ
Published 20 ಮೇ 2022, 16:14 IST
Last Updated 20 ಮೇ 2022, 16:14 IST

ಮಂಗಳೂರು: ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಟೆಡೆಕ್ಸ್ ಭಾಷಣ ಸರಣಿ ಕಾರ್ಯಕ್ರಮವನ್ನು ಮೇ 22ರಂದು ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಫಾದರ್ ಪ್ರವೀಣ್ ಮಾರ್ಟಿಸ್ ಎಸ್.ಜೆ. ಶುಕ್ರವಾರ ಇಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅಂದು ಬೆಳಿಗ್ಗೆ 8.20ರಿಂದ ನೋಂದಣಿ ಆರಂಭವಾಗಲಿದ್ದು, 9 ಗಂಟೆಯಿಂದ ಉಪನ್ಯಾಸ ಕಾರ್ಯಕ್ರಮ ಆರಂಭವಾಗಲಿದೆ. ಉತ್ಸಾಹಿ ಚಿಂತಕರಿಂದ ಇಂದಿನ ತಲೆಮಾರಿಗೆ ಹೊಸ ಯೋಚನೆ ಮತ್ತು ಜ್ಞಾನವನ್ನು ಹರಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ‘ಅಜ್ಞಾತದೊಂದಿಗೆ ಒಂದಾಗಿ’ ಆಶಯದಡಿ ಕಾರ್ಯಕ್ರಮ ನಡೆಯಲಿದೆ’ ಎಂದರು.

ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕ್ಕೊಂಡು ಭಾಷಣಕಾರರು ವಿಷಯ ಮಂಡಿಸಲಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿಯ ಭಾಷಣಕಾರರಾದ ಪಂಕಜ್ ಮೋದಿ, ರಾಹುಲ್ ಜಾಧವ್, ಶಶಿಧರ್ ಡೋಂಗ್ರೆ, ರಮಾ ವೈದ್ಯನಾಥನ್, ರಿಧಾ ಗ್ಯಾಟ್ಪೋ, ಸತ್ಯ ಥರಿಯನ್, ಹ್ಯಾರಿಸ್ ಅಬೂಬಕ್ಕರ್ ಮತ್ತು ಜಾಸ್ಮಿರ್ ಥಾಕೂರ್ ಮುಂತಾದವರು ವಿಷಯ ಮಂಡಿಸಲಿದ್ದಾರೆ. ಹೆಸರು ನೋಂದಣಿಗಾಗಿ 8722969426 ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ADVERTISEMENT

ಕಾಲೇಜಿನ ರಿಜಿಸ್ಟ್ರಾರ್ ಡಾ.ಆಲ್ವಿನ್ ಡೇಸಾ, ಕಾರ್ಯಕ್ರಮ ಸಂಯೋಜಕರಾದ ಫ್ಲೋನಾ ಸೋನ್ಸ್, ಲೆತಿಶಿಯಾ ಡಿಕೋಸ್ಟ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಚಂದ್ರಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.