ADVERTISEMENT

ಮಂಗಳೂರು: ನ್ಯಾಯಾಲಯ ಆವರಣದ ಗೋಡೆಯಲ್ಲಿ ಪ್ರಚೋದನಾಕಾರಿ ಬರಹ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 5:43 IST
Last Updated 29 ನವೆಂಬರ್ 2020, 5:43 IST
ಮಂಗಳೂರು ಪಿವಿಎಸ್ ವೃತ್ತ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯಲ್ಲಿ ಕಂಡುಬಂದ ಬರಹ
ಮಂಗಳೂರು ಪಿವಿಎಸ್ ವೃತ್ತ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯಲ್ಲಿ ಕಂಡುಬಂದ ಬರಹ   

ಮಂಗಳೂರು: ನಗರದ ಮತ್ತೊಂದು ಕಡೆ ಪ್ರಚೋದನಾಕಾರಿ ಗೋಡೆ ಬರಹವು ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡಿದೆ.

ನಗರದ ಪಿವಿಎಸ್ ವೃತ್ತ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯಲ್ಲಿ ಈ ಬರಹ ಕಂಡುಬಂದಿದೆ.

ಗೋಡೆಯ ಮೇಲೆ ‘Gustak e rasool ek hi saza tan say juda’ ಎಂದು ಬರೆಯಲಾಗಿದೆ. ಬರಹದಲ್ಲಿರುವುದು ‘ಪ್ರವಾದಿಗೆ ಕೋಪ‌ ಬಂದರೆ ಒಂದೇ‌ ಶಿಕ್ಷೆ; ಅದು ದೇಹದಿಂದ ತಲೆ‌ ಬೇರ್ಪಡಿಸುವುದು’ ಎಂದು ಹೇಳಲಾಗಿದೆ.

ADVERTISEMENT

ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಕದ್ರಿ ಸರ್ಕ್ಯೂಟ್ ಹೌಸ್ ರಸ್ತೆಯ ಅಪಾರ್ಟ್‌ಮೆಂಟ್ ಕಾಂಪೌಡ್ ಗೋಡೆಯೊಂದರಲ್ಲಿ ಲಷ್ಕರ್ ಪರ ಗೋಡೆ ಬರಹ ಕಾಣಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.