ADVERTISEMENT

ಮೂಡುಬಿದಿರೆ | 'ಹೆಣ್ಣು ಮಕ್ಕಳಲ್ಲಿ ಸಾಧಿಸುವ ಛಲ'

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನವರಾತ್ರಿ-ನವಶಕ್ತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 6:41 IST
Last Updated 24 ಸೆಪ್ಟೆಂಬರ್ 2025, 6:41 IST
ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ಸೋಮವಾರ ನವರಾತ್ರಿ-ನವಶಕ್ತಿ ಕಾರ್ಯಕ್ರಮದಲ್ಲಿ ಒಂಬತ್ತು ಮ‌ಹಿಳೆಯರನ್ನು ಸನ್ಮಾನಿಸಲಾಯಿತು 
ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ಸೋಮವಾರ ನವರಾತ್ರಿ-ನವಶಕ್ತಿ ಕಾರ್ಯಕ್ರಮದಲ್ಲಿ ಒಂಬತ್ತು ಮ‌ಹಿಳೆಯರನ್ನು ಸನ್ಮಾನಿಸಲಾಯಿತು    

ಮೂಡುಬಿದಿರೆ: ‘ಮಹಿಳಾ ಸ್ವಾವಲಂಬನೆ ಸಮಾಜದ ಪ್ರಗತಿಯ ಮೂಲವಾಗಿದೆ. ಹೆಣ್ಣುಮಕ್ಕಳಿಗೆ ಕನಸು ಕಾಣಲು ಹಕ್ಕು ಇದೆ. ಸಾಧಿಸಲು ಶಕ್ತಿ ಇದೆ’ ಎಂದು ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಅಭಿಪ್ರಾಯಪಟ್ಟರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಯುಕ್ತ ನವರಾತ್ರಿಯ ಸೋಮವಾರ ನಡೆದ ನವರಾತ್ರಿ-ನವಶಕ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ನವರಾತ್ರಿ ಕಾರ್ಯಕ್ರಮವು ಆಧ್ಯಾತ್ಮಿಕತೆಯ ಜತೆಗೆ ಹೆಣ್ಣಿನ ಮಹತ್ವವನ್ನು ಬಿಂಬಿಸುತ್ತದೆ. ಹೆಣ್ಣು ತನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ನವರಾತ್ರಿಯು ಹೆಣ್ಣಿನ ಶಕ್ತಿಯ ಪ್ರತೀಕ ಎಂದು ಹೇಳಿದರು.

ADVERTISEMENT

ಶಾರದಾದೇವಿಗೆ ಪುಷ್ಪ ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರ ತಾಯಿ ಪದ್ಮಾವತಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಅಮರಾಜಿ, ಸುಮಿತ್ರಾ, ಚಂದನಾ, ದೀಪಾ ಉಮೇಶ್ ರಾವ್, ಅನಿತಾ ಸಿಕ್ವೇರಾ, ಸೌಮ್ಯ ಕುಲದೀಪ್, ದಿವ್ಯಾ ಪಡಿವಾಳ್, ರೇಷ್ಮಾ ವರ್ಮ, ಪ್ರಿಯಾ ಕ್ವಿನಿ ರೋಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು.

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲ ಪ್ರಸಾದ್, ಅಪೇಕ್ಷ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕಿಯರಾದ ಅರ್ಚನಾ, ಸ್ವಾತಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.