ಉಳ್ಳಾಲ: ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ತೊಕ್ಕೊಟ್ಟು ಮಾಯಾ ಬಾರ್ ಬಳಿ ನಡೆದಿದೆ.
ಅಳೇಕಲ ನಿವಾಸಿ ಫೈಝಲ್ ಗಾಯಗೊಂಡಿರುವ ವ್ಯಕ್ತಿ. ಫೈಝಲ್ ಗುರುವಾರ ತಡರಾತ್ರಿ 12.30ರ ವೇಳೆಗೆ ಒಂಭತ್ತುಕೆರೆಯಲ್ಲಿರುವ ಪತ್ನಿ ಮನೆಯಿಂದ ಕಲ್ಲಾಪುವಿನ ಗ್ಲೋಬಲ್ ಮಾರುಕಟ್ಟೆಗೆ ಸ್ಕೂಟರ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಮತ್ತೊಂದು ಬೈಕ್‌ನಲ್ಲಿ ಮತ್ತಿಬ್ಬರು ಯುವಕರು ಆಯುಧಗಳೊಂದಿಗೆ ಬಂದಿದ್ದು, ಎರಡು ಬೈಕ್‌ನಲ್ಲಿ ನಾಲ್ವರು ಇದ್ದರು. ಅವರು ಮಂಗಳೂರಿನ ಕಡೆ ತೆರಳಿರುವುದಾಗಿ ತಿಳಿದುಬಂದಿದೆ.
ಘಟನೆಯಿಂದ ಫೈಝಲ್ ಬೆನ್ನಿಗೆ ಗಾಯವಾಗಿದ್ದು, ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಧ ಪ್ರಕರಣ ದಾಖಲಾಗಿದೆ. ಉಳ್ಳಾಲ ಪೊಲೀಸರು ತೊಕ್ಕೊಟ್ಟುವಿನ ಮಾಯಾ ಬಾರ್ ಬಳಿಯ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.