ADVERTISEMENT

ಕುರ್ನಾಡು ಮಸೀದಿ ಬಳಿ ಶಾಂತಿ ಕದಡಲು ಸೃಷ್ಟಿಸಲು ಯತ್ನ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 5:46 IST
Last Updated 15 ನವೆಂಬರ್ 2021, 5:46 IST

ಮಂಗಳೂರು: ಕುರ್ನಾಡಿನ ಮಸೀದಿಯ ಬಳಿ ಶಾಂತಿ ಕದಡಲು ಯತ್ನಿಸಿದ ಮೂವರನ್ನು ಪೊಲೀಸರು ವಶಕ್ಕೆ‌ ಪಡೆದಿದ್ದಾರೆ.

ಭಾನುವಾರ ರಾತ್ರಿ‌ಮೂವರು ಯುವಕರು‌ ಮಸೀದಿಯ ಬಳಿ ಬಂದು ಬೊಬ್ಬೆ ಹಾಕಿದ್ದಾರೆ. ಅಲ್ಲದೇ ಮಸೀದಿಯೊಳಗೆ ನುಗ್ಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಯುವಕರನ್ನು ಬೆನ್ನಟ್ಟಿದ ಸಾರ್ವಜನಿಕರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ.‌ ಇನ್ನಷ್ಟೇ‌ ಎಫ್‌ಐಆರ್ ದಾಖಲಿಸಬೇಕಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.