ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಹೊಸ ಪಿಯು ಕಾಲೇಜಿಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 3:54 IST
Last Updated 21 ಜುಲೈ 2022, 3:54 IST
   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹೊಸ ಪದವಿಪೂರ್ವ ಕಾಲೇಜುಗಳನ್ನು ತೆರೆಯಲು ಪದವಿಪೂರ್ವ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಈ ವರ್ಷದಿಂದಲೇ ಈ ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಿವೆ.

ಬೆಳ್ತಂಗಡಿ ತಾಲ್ಲೂಕಿನ ಗೇರುಕಟ್ಟೆ, ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ, ಸಹರಾ ಪದವಿಪೂರ್ವ ಕಾಲೇಜು ಅಡ್ಡೂರು ಇವುಗಳಿಗೆ ಅನುಮತಿ ದೊರೆತಿದೆ. ‘ಜಿಲ್ಲೆಯಲ್ಲಿ ಒಟ್ಟು 14 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, ಮೂರು ಸಂಸ್ಥೆಗಳಿಗೆ ಅನುಮತಿ ದೊರೆತಿದೆ. ದಾಖಲೆಗಳ ಅಸಮರ್ಪಕ ಪೂರೈಕೆಯ ಕಾರಣಕ್ಕೆ ಉಳಿದ ಅರ್ಜಿಗಳು ಬಾಕಿ ಇವೆ. ಕಾಲೇಜು ಆರಂಭಕ್ಕೆ ಅನುಮತಿ ನೀಡುವುದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಅಧಿಕಾರವಾಗಿದೆ. ಸ್ಥಳೀಯವಾಗಿ ಬಂದಿರುವ ಅರ್ಜಿಗಳನ್ನು ಇಲ್ಲಿಂದ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ’ ಎಂದು ಡಿಡಿಪಿಯು ಜಯಣ್ಣ ಪ್ರತಿಕ್ರಿಯಿಸಿದರು.

‘ಹಿಜಾಬ್ ವಿವಾದದ ನಂತರ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಪಿಯು ಕಾಲೇಜು ಆರಂಭಕ್ಕೆ ಹೆಚ್ಚು ಆಸಕ್ತಿ ತೋರಿವೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಹೆಚ್ಚಿನವು ಮುಸ್ಲಿಂ ಸಂಸ್ಥೆಗಳದ್ದಾಗಿವೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.