ADVERTISEMENT

ಉಜಿರೆ: ಮೂರು ಅಂಗಡಿಗಳಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 4:36 IST
Last Updated 9 ಜೂನ್ 2025, 4:36 IST
   

ಬೆಳ್ತಂಗಡಿ: ಉಜಿರೆ ಜನಾರ್ದನ ದೇವಸ್ಥಾನದ ದ್ವಾರದ ಬಳಿ ಇರುವ ಮೂರು ಅಂಗಡಿಗಳಲ್ಲಿ ಶನಿವಾರ ರಾತ್ರಿ ಕಳವು ನಡೆದಿದೆ.

ಮೂರು ಅಂಗಡಿಗಳ ಶಟರ್‌ಗೆ ಹಾಕಿದ್ದ ಬೀಗವನ್ನು ಸುತ್ತಿಗೆಯಿಂದ ಮುರಿದು ಒಳನುಗ್ಗಿರುವ ಕಳ್ಳರು ಒಟ್ಟು ₹ 38 ಸಾವಿರ ನಗದು ಕಳವು ಮಾಡಿದ್ದಾರೆ.

ಬಾಲಾಜಿ ಎಂಟರ್‌ಪ್ರೈಸಸ್‌ನಲ್ಲಿ ₹30 ಸಾವಿರ ನಗದು, ಮಧುರ ಎಂಟರ್‌ಪ್ರೈಸ್‌ನಲ್ಲಿ 6 ಸಾವಿರ, ಗಣೇಶ್ ಎಲೆಕ್ಟ್ರಿಕಲ್‌ನಲ್ಲಿ ₹2 ಸಾವಿರ ಕಳ್ಳತನ ಮಾಡಲಾಗಿದೆ ಎಂದು ಬಾಲಾಜಿ ಅಂಗಡಿ ಮಾಲೀಕ ಹರೀಶ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುಬ್ಬಾಪುರ ಮಠ ಹಾಗೂ ಮಂಗಳೂರಿನಿಂದ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.