ADVERTISEMENT

ಟ್ರೇಡ್ ಲೈಸೆನ್ಸ್‌ ಇನ್ನಷ್ಟು ಸುಲಭ

ಆ್ಯಪ್‌ ಸಿದ್ಧಪಡಿಸಿದ ಮಂಗಳೂರು ಮಹಾನಗರ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 4:36 IST
Last Updated 22 ನವೆಂಬರ್ 2020, 4:36 IST

ಮಂಗಳೂರು: ನಗರದಲ್ಲಿ ಟ್ರೇಡ್‌ ಲೈಸೆನ್ಸ್‌ ಪಡೆಯುವುದಕ್ಕೆ ಎದುರಾಗುತ್ತಿರುವ ತೊಂದರೆಗಳನ್ನು ನಿವಾರಿಸಲು ಮಂಗಳೂರು ಮಹಾನಗರ ಪಾಲಿಕೆ ಹೊಸ ಆ್ಯಪ್‌ ಅನ್ನು ಸಿದ್ಧಪಡಿಸಿದ್ದು, ಬರುವ ಜನವರಿಯಿಂದ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಈ ಆ್ಯಪ್‌ ಮೂಲಕ ವ್ಯಾಪಾರಿಗಳು ಲೈಸೆನ್ಸ್‌ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಶುಲ್ಕವನ್ನು ನೆಟ್‌ ಬ್ಯಾಂಕಿಂಗ್ ಅಥವಾ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಪಾವತಿಸಬಹುದಾಗಿದೆ. ಫೋನ್‌ನಲ್ಲಿಯೇ ಈ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು, ಹೊಸ ಲೈಸೆನ್ಸ್‌, ಲೆಸೆನ್ಸ್‌ ನವೀಕರಣ, ರದ್ದತಿಗೆ ಅರ್ಜಿ ಸಲ್ಲಿಸಬಹುದು. ತಮ್ಮ ಅರ್ಜಿಯ ಸ್ಥಿತಿಗತಿಯನ್ನೂ ಈ ಆ್ಯಪ್‌ನಲ್ಲಿಯೇ ನೋಡಬಹುದು.

ಈ ಆ್ಯಪ್‌ನಲ್ಲಿ ಸೇವಾ ಕೇಂದ್ರಗಳು, ಕಚೇರಿ, ಕೈಗಾರಿಕೆ, ಆಸ್ಪತ್ರೆ, ಮಾರುಕಟ್ಟೆ, ಸಭಾಂಗಣ, ಅಟೋಮೊಬೈಲ್‌ ಶೋರೂಂ, ಬಿಡಿ ಭಾಗಗಳು ಸೇರಿದಂತೆ 10 ಕೆಟಗರಿಗಳನ್ನು ನೀಡಲಾಗಿದೆ. ಸಂಬಂಧಿಸಿದ ಕೆಟಗರಿ ಆಯ್ಕೆ ಮಾಡಿಕೊಂಡ ನಂತರ, ಸಬ್‌ ಕೆಟಗರಿಯಲ್ಲಿ ದಾಖಲೆಗಳು ಮತ್ತು ಫೋಟೊಗಳನ್ನು ಅಪ್‌ಲೋಡ್‌ ಮಾಡಬಹುದಾಗಿದೆ. ತಮ್ಮ ವಹಿವಾಟಿನ ಸ್ಥಳದ ಮೂರು ಫೋಟೊಗಳ ಜೊತೆಗೆ, ವ್ಯಾಪಾರಿಗಳು ತಮ್ಮ ಸೆಲ್ಫಿಗಳನ್ನು ಕಳಹಿಸಬೇಕು. ಆ್ಯಪ್‌ನಲ್ಲಿರುವ ಜಿಯೊ ಟ್ಯಾಗಿಂಗ್‌ನ ಸಹಾಯದಿಂದ ಅಧಿಕಾರಿಗಳು ವಹಿವಾಟು ಕೇಂದ್ರದ ಸ್ಥಳವನ್ನು ಗುರುತಿಸಲು ಅನುಕೂಲವಾಗಲಿದೆ.

ADVERTISEMENT

‘ಈಗಾಗಲೇ ಈ ಆ್ಯಪ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳ ಮಟ್ಟದ ತರಬೇತಿ ಪೂರ್ಣವಾಗಿದೆ. ಇದೀಗ ವ್ಯಾಪಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಆ್ಯಪ್‌ಗೆ ಸಂಬಂಧಿಸಿದ ತೊಂದರೆಗಳನ್ನು ಪರಿಹರಿಸಲು ಜನವರಿವರೆಗೆ ಪಾಲಿಕೆ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ’ ಎಂದು ಪಾಲಿಕೆ ಪರಿಸರ ಎಂಜಿನಿಯರ್‌ ಮಧು ಮನೋಹರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.