ADVERTISEMENT

ಮಂಗಳೂರು: ಯುವ ಕಾಂಗ್ರೆಸ್ ಪದಾಧಿಕಾರಿಯಾಗಿ ಮಂಗಳಮುಖಿ ಸಂಜನಾ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 1:15 IST
Last Updated 7 ಫೆಬ್ರುವರಿ 2021, 1:15 IST
ಸಂಜನಾ ಚಲವಾದಿ
ಸಂಜನಾ ಚಲವಾದಿ   

ಮಂಗಳೂರು: ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿರುವ ಮಂಗಳಮುಖಿ ಸಂಜನಾ ಚಲವಾದಿ ಅವರು ಯುವ ಕಾಂಗ್ರೆಸ್‌ ಮಂಗಳೂರು ದಕ್ಷಿಣ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಈ ಹುದ್ದೆ ಅಲಂಕರಿಸಿದ ಮೊದಲ ಮಂಗಳಮುಖಿ ಇವರಾಗಿದ್ದಾರೆ.

ಜನವರಿ 10ರಿಂದ 12 ರವರೆಗೆ ಆನ್‌ಲೈನ್‌ನಲ್ಲಿ ಯುವ ಕಾಂಗ್ರೆಸ್‌ ಚುನಾವಣೆಗಳು ನಡೆದಿದ್ದು, ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಮಂಗಳೂರು ದಕ್ಷಿಣ ಘಟಕದ ಅಧ್ಯಕ್ಷರಾಗಿ ಶಿವ ಆಯ್ಕೆಯಾಗಿದ್ದು, ಸೋಹನ್ ಮತ್ತು ದೀಕ್ಷಿತ್ ಪೂಜಾರಿ ಉಪಾಧ್ಯಕ್ಷರಾಗಿದ್ದಾರೆ. ಸಂಜನಾ ಚಲವಾದಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

‘ಯುವ ಕಾಂಗ್ರೆಸ್ ಮಂಗಳೂರು ದಕ್ಷಿಣ ಬ್ಲಾಕ್‌ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದು ನನಗೆ ತುಂಬಾ ಸಂತೋಷವಾಗಿದೆ’ ಎಂದು ಸಂಜನಾ ತಿಳಿಸಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ 2018 ರಲ್ಲಿ ನಡೆದ ‘ಪರಿವರ್ತನ್ ಟ್ರಾನ್ಸ್ ಕ್ವೀನ್’ ಸೌಂದರ್ಯ ಸ್ಪರ್ಧೆಯಲ್ಲಿ ಜಯಗಳಿಸಿರುವ ಸಂಜನಾ, ‘ನನಗೆ ಸಹಾಯ ಮಾಡಿದ ಮತ್ತು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.