ಮಂಗಳೂರು: ‘ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಪರಿಸರ ದಿನದ ಅಂಗವಾಗಿ ದೇಶದಾದ್ಯಂತ ʻತಾಯಿಯ ಹೆಸರಿನಲ್ಲಿ ಒಂದು ಸಸಿ’ ಎಂಬ ಅಭಿಯಾನ ನಡೆಸಲು ಕರೆ ನೀಡಿದ್ದು, ದಕ್ಷಿಣ ಕನ್ನಡದ ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಡಾ.ಗಿರಿಧರ್ ರಾವ್ ಸಂಜೀವಿ ಭಾಯಿ ವೃದ್ದಾಶ್ರಮದ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಈ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದರು.
‘ತಾಯಂದಿರ ಹೆಸರಿನಲ್ಲಿ ಗಿಡನೆಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ನಗರವನ್ನು ‘ಹಸಿರು ಕುಡ್ಲ-ಸ್ವಚ್ಛ ಕುಡ್ಲ’ವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು’ ಎಂದು ಕ್ಯಾ.ಚೌಟ ಮನವಿ ಮಾಡಿದರು.
‘ಈ ವೃದ್ದಾಶ್ರಮ’ದಲ್ಲಿರುವ ತಾಯಂದಿರ ಹೆಸರಿನಲ್ಲಿ ಗಿಡನೆಟ್ಟಗಳಿಗೆ ಅವಿಸ್ಮರಣೀಯ’ ಎಂದರು.
‘ಪ್ರಧಾನಿ ಅಪಾರವಾಗಿ ಗೌರವಿಸುವ ನಾರೀಶಕ್ತಿ ನನ್ನ ಚುನಾವಣಾ ಸಮಯದಲ್ಲಿ ಮಹತ್ವದ ಪಾತ್ರವಹಿಸಿದೆ. ಚುನಾವಣೆಯ ಠೇವಣಿಗಾಗಿ ತಾಯಂದಿರು ನೀಡಿದ ಹಣ ನನಗೆ ಅಮೂಲ್ಯವಾದದ್ದು’ ಎಂದು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.