ADVERTISEMENT

‘ಕರಾವಳಿ ಜನರ ಸ್ವಾಭಿಮಾನದ ಪ್ರತೀಕ ಜಾರ್ಜ್‌’

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 7:31 IST
Last Updated 29 ಜನವರಿ 2019, 7:31 IST
   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಡ ಕುಟುಂಬದಲ್ಲಿ ಜನಿಸಿದ ಜಾರ್ಜ್‌ ಫರ್ನಾಂಡಿಸ್‌ ದೇಶದ ನಾಯಕರಾಗಿ ಗುರುತಿಸಿಕೊಂಡು, ಅಂತರರಾಷ್ಟ್ರೀಯವಾಗಿಯೂ ತಮ್ಮ ಛಾಪವನ್ನು ಬೀರುವಲ್ಲಿ ಯಶಸ್ವಿಯಾಗಿರುವುದು ಪ್ರತಿಯೊಬ್ಬ ವ್ಯಕ್ತಿಗೂ ಪ್ರೇರಣೆ ನೀಡುವ ಸಾಧನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

ಕೇಂದ್ರದ ಮಾಜಿ ಸಚಿವ ಜಾರ್ಜ್‌ ಫರ್ನಾಂಡಿಸ್‌ ನಿಧನದ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಿಕರಿಗೆ ಮತ್ತು ಸ್ನೇಹಿತರಿಗೆ ದೇವರು ನೀಡಲಿ ಎಂದು ಹಾರೈಸಿದ ಅವರು, ಅಂತಹ ಧೀಮಂತ ವ್ಯಕ್ತಿಯ ಸಾಧನೆಯು ಹೊಸ ತಲೆಮಾರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

‘ಅವರು ಕರಾವಳಿ ಜನರ ಸ್ವಾಭಿಮಾನದ ಪ್ರತೀಕದಂತೆ ಇದ್ದರು. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಹಲವು ಕೊಡುಗೆಗಳನ್ನು ಕೊಟ್ಟ ವ್ಯಕ್ತಿ. ಬಡಕುಟುಂಬದಲ್ಲಿ ಹುಟ್ಟಿ ಮುಂಬೈಯಲ್ಲಿ ಬಡ ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ಪರವಾಗಿ ಸಕ್ರಿಯರಾಗಿ ಹೋರಾಟ ನಡೆಸಿದರು. ಬಿಹಾರದಿಂದ ಚುನಾವಣೆಗೆ ಸ್ಪರ್ಧಿಸಿದರು. ದೇಶದ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ ಅದ್ಭುತ ವ್ಯಕ್ತಿತ್ವ ಅವರದಾಗಿತ್ತು’ ಎಂದು ಸಚಿವ ಖಾದರ್‌ ಹೇಳಿದರು.

ADVERTISEMENT

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.