ಮಂಗಳೂರು: ಉಡುಪಿ ಮಲ್ಲಿಗೆ ಹೂವಿನ ದರ ಗಗನಕ್ಕೇರಿದ್ದು, ದರ ಒಂದು ಚೆಂಡಿಗೆ (3 ಅಡಿ) ₹600ಕ್ಕೆ ತಲುಪಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಹೂ ಲಭ್ಯವಾಗುತ್ತಿಲ್ಲ.
ವಾರದ ಹಿಂದೆ ಒಂದು ಅಟ್ಟಿಗೆ (ನಾಲ್ಕು ಚೆಂಡು) ₹400ಕ್ಕೆ ದೊರೆಯುತ್ತಿದ್ದ ಉಡುಪಿ ಮಲ್ಲಿಗೆ ದರ 4–5 ದಿನಗಳಿಂದ ಏರುತ್ತಲೇ ಇದೆ. ‘ಮಳೆಗೆ ಮೊಗ್ಗುಗಳು ಹಾಳಾಗಿದ್ದು, ಇಳುವರಿ ಕಡಿಮೆ ಆಗಿರುವ ಕಾರಣ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
‘ಉಡುಪಿ ಮಲ್ಲಿಗೆ, ಭಟ್ಕಳ ಮಲ್ಲಿಗೆ ಮಾರುಕಟ್ಟೆಗೆ ಜಾಸ್ತಿ ಬಂದಿಲ್ಲ. ವ್ಯಾಪಾರಸ್ಥರಿಗೂ ಸಿಗುತ್ತಿಲ್ಲ. ದರ ಏರಿಕೆಯಿಂದಾಗಿ ಗ್ರಾಹಕರೂ ಖರೀದಿಸಲು ಹಿಂದೇಟು ಹಾಕುತ್ತಾರೆ’ ಎನ್ನುತ್ತಾರೆ ಮಲ್ಲಿಕಟ್ಟೆ ಮಾರ್ಕೆಟ್‌ನ ಹೂ ವ್ಯಾಪಾರಿ ಶೋಭಾ.
ಉಳಿದಂತೆ, ಜಾಜಿ ಹೂ ಚೆಂಡಿಗೆ ₹130, ಕಾಕಡಾ ಮಲ್ಲಿಗೆ ಮೊಳಕ್ಕೆ ₹50 ದರವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.