ಉಜಿರೆ: ದೇಶದ ಎಲ್ಲ ಭಾಷೆಗಳಿಗೂ ಸಂಸ್ಕೃತ ಮೂಲವಾಗಿದ್ದು, ಎಲ್ಲರೂ ಸಂಸ್ಕೃತ ಕಲಿಯಬೇಕು. ಸಂಸ್ಕೃತ ರಾಷ್ಟ್ರ ಭಾಷೆಯಾಗಬೇಕು ಎಂದು ಎಸ್‌ಡಿಎಂ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಸಂಯೋಜಕ, ನಿವೃತ್ತ ಉಪನ್ಯಾಸಕ ಪ್ರೊ.ಶಶಿಶೇಖರ ಎನ್.ಕಾಕತ್ಕರ್ ಹೇಳಿದರು.
ಎಸ್‌ಡಿಎಂ ಕಾಲೇಜಿನ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಸಂಸ್ಕೃತ ನಾಟಕಗಳ ಸಮೀಕ್ಷೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಸಂಸ್ಕೃತ ಪ್ರಾಧ್ಯಾಪಕ ಪ್ರಸನ್ನಕುಮಾರ್ ಐತಾಳ, ಸಂಸ್ಕೃತ ಇದ್ದರೆ ಸಂಸ್ಕೃತಿ ಇರುತ್ತದೆ. ಸತ್ಯ, ಧರ್ಮ, ನ್ಯಾಯ-ನೀತಿಯ ಸಂದೇಶ ಸಂಸ್ಕೃತ ನಾಟಕಗಳಲ್ಲಿ ಅಭಿವ್ಯಕ್ತವಾಗಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿಯಾಗಿದೆ ಎಂದರು.
ಆಂಧ್ರಪ್ರದೇಶದ ಮದನಪಲ್ಲಿಯ ಋಷಿವಾಟಿಕಾ ಗುರುಕುಲದ ಶಿಕ್ಷಕಿ ಗಾಯತ್ರಿ ಭಾರಧ್ವಾಜ್ ಮಾತನಾಡಿದರು. ಕಾರವಾರದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಎಂ.ಗಿರಿ, ಶೃಂಗೇರಿಯ ಸಂಸ್ಕೃತ ವಿ.ವಿ.ಪ್ರಾಚಾರ್ಯ ವೆಂಕಟರಮಣ ಭಟ್ ಮಾಹಿತಿ ನೀಡಿದರು.
ವಿಚಾರಸಂಕಿರಣದ ಸಂಯೋಜಕ ಶ್ರೇಯಸ್ ಪಾಳಂದೆ ಭಾಗವಹಿಸಿದ್ದರು.
ಸಂಸ್ಕೃತ ಉಪನ್ಯಾಸಕ ಪ್ರೊ.ಶ್ರೀಧರ ಭಟ್ ಸ್ವಾಗತಿಸಿದರು. ಆತ್ಮಶ್ರೀ ವಂದಿಸಿದರು. ಧರಿತ್ರಿ ಭಿಡೆ, ಸಿಂಚನಾ ಪಾಳಂದೆ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.