ADVERTISEMENT

ಉಳ್ಳಾಲ: ಐವರು ಮೀನುಗಾರರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 4:02 IST
Last Updated 28 ಏಪ್ರಿಲ್ 2025, 4:02 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಉಳ್ಳಾಲ: ಇಲ್ಲಿನ ಕೋಟೆಪುರ ಅಳಿವೆ ಬಾಗಿಲು ಬಳಿ ಸಮುದ್ರದ ಅಲೆಗಳಿಗೆ ಸಿಲುಕಿದ ಮೀನಗಾರಿಕಾ ಬೋಟು ಭಾನುವಾರ ಮಗುಚಿಬಿದ್ದಿದೆ.

ಬೋಟ್‌ನಲ್ಲಿದ್ದ ಐವರನ್ನು ಇನ್ನೊಂದು ಬೋಟ್‌ನ ಮೀನುಗಾರರು ರಕ್ಷಿಸಿದ್ದಾರೆ.

ADVERTISEMENT

ಮೊಗವೀರಪಟ್ಣ ನಿವಾಸಿ ರವಿ ಪುತ್ರನ್ ಅವರಿಗೆ ಸೇರಿದ ‘ಸವಿತಾ ಶ್ರುತಿ’ ಮೀನುಗಾರಿಕಾ ಬೋಟ್ ಮಗುಚಿಬಿದ್ದಿದೆ. ಈ ಬೋಟ್‌ನೊಂದಿಗೆ ಮೀನುಗಾರಿಕೆಗೆ ತೆರಳಿದ್ದ ಶ್ರೀದುರ್ಗಾ ಬೋಟ್‌ನ ಮೀನುಗಾರರು ರವಿಪುತ್ರನ್, ಲಕ್ಷ್ಮಣ, ವಿಶ್ವಜೀತ್ ಬಂಗೇರ, ಜಗದೀಶ್ ಸುವರ್ಣ, ರವಿ ಕರ್ಕೇರ ಅವರನ್ನು ರಕ್ಷಿಸಿದ್ದಾರೆ.

ಮೊಗವೀರಪಟ್ಣದಿಂದ ತೆರಳುತ್ತಿದ್ದಾಗ ಅಳಿವೆ ಬಾಗಿಲು ಬಳಿ ದೊಡ್ಡ ಅಲೆಗಳಿಗೆ ಸಿಲುಕಿ ಅವಘಡ ನಡೆದಿದ್ದು, ಸುಮಾರು ₹ 8 ಲಕ್ಷ ನಷ್ಟ ಅಂದಾಜಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.