ADVERTISEMENT

ಉಳ್ಳಾಲ: ಫೆ.5ರಿಂದ ಮಾಡೂರು ಪಾಡಾಂಗರ ಭಗವತೀ ಕ್ಷೇತ್ರ ಬ್ರಹ್ಮಕಲಶೋತ್ಸವ

​ಪ್ರಜಾವಾಣಿ ವಾರ್ತೆ
Published 30 ಜನವರಿ 2025, 13:33 IST
Last Updated 30 ಜನವರಿ 2025, 13:33 IST
ಪಾಡಾಂಗರ ಭಗವತೀ ಕ್ಷೇತ್ರ
ಪಾಡಾಂಗರ ಭಗವತೀ ಕ್ಷೇತ್ರ   

ಉಳ್ಳಾಲ: ಮಾಡೂರು ಪಾಡಾಂಗರ ಭಗವತೀ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ.5ರಿಂದ 10ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಉಚ್ಚಿಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಫೆ.5ರಂದು ಸಂಜೆ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ನಡೆಯಲಿದೆ. ಫೆ.10ರಂದು ಬೆಳಿಗ್ಗೆ 8.48ರಿಂದ 9.32ರವರೆಗೆ ಭಗವತೀ, ಪರಿವಾರ ದೈವ ಸಾನ್ನಿಧ್ಯಗಳ ಪುನರ್ ಪ್ರತಿಷ್ಠೆ, ಜೀವಕಲಶಾಭಿಷೇಕ, ಶಿಖರ ಪ್ರತಿಷ್ಠೆ ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದರು.

ಧಾರ್ಮಿಕ ಸಭೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಧಾರ್ಮಿಕ ವಿಧಿ ವಿಧಾನಗಳು, ಭಜನೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಭಟ್ನಗರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ಉಮೇಶ್ಚಂದ್ರ, ಗುರಿಕಾರ, ಆಡಳಿತ ಮೊಕ್ತೇಸರ ಎನ್.ಜಯಪ್ರಕಾಶ್ ಮಾತನಾಡಿದರು. ಪವನ್ ರಾಜ್ ಕೊಲ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.