ADVERTISEMENT

ಉಳ್ಳಾಲ | ಕೆಂಪುಕಲ್ಲು, ಮರಳು ಕೊರತೆ: ಕಾರ್ಮಿಕರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:19 IST
Last Updated 23 ಜೂನ್ 2025, 14:19 IST
ಪಜೀರು ಗ್ರಾಮ ಪಂಚಾಯಿತಿ ಮುಂಭಾಗ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು
ಪಜೀರು ಗ್ರಾಮ ಪಂಚಾಯಿತಿ ಮುಂಭಾಗ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು   

ಉಳ್ಳಾಲ: ಕೆಂಪುಕಲ್ಲು, ಮರಳುಗಾರಿಕೆ ನಿಷೇಧದಿಂದ ಕಾರ್ಮಿಕರು ಕಷ್ಟದಲ್ಲಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಹೇಳಿದರು.

ಪಜೀರು ಗ್ರಾಮ ಪಂಚಾಯಿತಿ ಮುಂಭಾಗ ಬಿಜೆಪಿ ಪಾವೂರು ಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಮೊಹಮ್ಮದ್ ಅಝ್ಗರ್ ಮಾತನಾಡಿದರು.

ADVERTISEMENT

ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮುಖಂಡರಾದ ಜಯರಾಮ್ ಪೂಂಜ, ರಾಜೇಶ್ ಶೆಟ್ಟಿ ಪಜೀರುಗುತ್ತು, ಜಯರಾಮ್ ಶೆಟ್ಟಿ ಕಂಬ್ಲಪದವು, ವಿಜೇತ್ ಪಜೀರ್, ಶಿವಕುಮಾರ್ ಅಡಪ, ಜಗದೀಶ್ ಕೋಟ್ಯಾನ್ ಪಾನೇಲ, ಪ್ರವೀಣ್ ಆಳ್ವ, ಕೃಷ್ಣ ಪ್ರಸಾದ್ ಪಜೀರ್, ಮುರಳೀಧರ್ ಕೊಣಾಜೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.