ADVERTISEMENT

ಉಳ್ಳಾಲ ತಾಲ್ಲೂಕು ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 14:34 IST
Last Updated 26 ಸೆಪ್ಟೆಂಬರ್ 2024, 14:34 IST
ನಾಟೆಕಲ್‌ನಲ್ಲಿರುವ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು
ನಾಟೆಕಲ್‌ನಲ್ಲಿರುವ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು   

ಉಳ್ಳಾಲ: ಮೂಲ ಸವಲತ್ತು, ಸರಿಯಾದ ಸೇವಾ ಸೌಲಭ್ಯಗಳು ನೀಡದೆ ಸುಮಾರು 17 ಆ್ಯಪ್‌ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹೇರಿರುವ ಒತ್ತಡದಿಂದ ಕೆಲಸ ಮಾಡಲು ಅಸಾಧ್ಯವಾಗಿದ್ದು, ಸಮಸ್ಯೆಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಳ್ಳಾಲ ತಾಲ್ಲೂಕು ಸಮಿತಿ ಅಧ್ಯಕ್ಷ ತೌಫಿಕ್ ಹೇಳಿದರು.

ಉಳ್ಳಾಲ ಕಂದಾಯ ಇಲಾಖೆಯ ಮುಂಭಾಗ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಆಶ್ರಯದಲ್ಲಿ ಉಳ್ಳಾಲ ತಹಶೀಲ್ದಾರ್ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಆಡಳಿತ ಲೆಕ್ಕಪರಿಶೋಧಕ ನಿಂಗಪ್ಪ ಜಜ್ಜೂರಿ ಮಾತನಾಡಿ, ತಂತ್ರಾಂಶಗಳ ಬಳಕೆಯ ಬಳಿಕ ಅದನ್ನು ನಿರ್ವಹಿಸಲು ಸಾಧ್ಯವಿಲ್ಲದ್ದಂತಾಗಿದೆ ಎಂದರು.

ADVERTISEMENT

ಮನವಿಯನ್ನು ತಹಶೀಲ್ದಾರ್ ಪುಟ್ಟರಾಜು ಅವರಿಗೆ ನೀಡಿದರು.

ಸಂಘದ ಪದಾಧಿಕಾರಿಗಳಾದ ಅಕ್ಷತಾ, ನವ್ಯಾ ಎಸ್.ರಾವ್, ಕಾವ್ಯಾ, ಲಾವಣ್ಯಾ ಕೆ., ಜಗದೀಶ್ ಶೆಟ್ಟಿ, ನಯನಾ, ರೇಷ್ಮಾ, ಅಮ್ಜದ್ ಖಾನ್, ಸುರೇಶ್, ಅಕ್ಷಿತಾ, ರಶೀದಾ, ಜಯಶ್ರೀ, ರಾಘವೇಂದ್ರ, ಪ್ರದೀಪ್, ಲಾವಣ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.