ADVERTISEMENT

ಬಚ್ಚಲು ಮನೆಗೆ ಇಣುಕಿದ ಆರೋಪ– ಆರೋಪಿ ಅಬ್ದುಲ್ ರಹಿಮಾನ್ ನ್ಯಾಯಾಂಗ ಬಂಧನಕ್ಕೆ

ನ್ಯಾಯಾಂಗ ಬಂಧನಕ್ಕೆ ಆರೋಪಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 10:58 IST
Last Updated 23 ಜುಲೈ 2024, 10:58 IST
<div class="paragraphs"><p>ಅಬ್ದುಲ್ ರಹಿಮಾನ್</p></div>

ಅಬ್ದುಲ್ ರಹಿಮಾನ್

   

ಉಪ್ಪಿನಂಗಡಿ: ಬಚ್ಚಲು ಮನೆಯಲ್ಲಿ ಯುವತಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯಿಂದ ಇಣುಕಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ADVERTISEMENT

ಪೆರಿಯಡ್ಕದ ನಿವಾಸಿ, ದಿನಸಿ ವ್ಯಾಪಾರಿ ಅಬ್ದುಲ್ ರಹಿಮಾನ್ ಬಂಧಿತ ಆರೋಪಿ.

ಯುವತಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯ ಬಾಗಿಲನ್ನು ಸರಿಸಲು ಯತ್ನಿಸಿದಾಗ ಉಂಟಾದ ಶಬ್ದದಿಂದ ಸಂಶಯಗೊಂಡ ಯುವತಿ ತನ್ನ ತಾಯಿಗೆ ತಿಳಿಸಿದ್ದಾಳೆ. ತಾಯಿ ಪರಿಶೀಲಿಸಿದಾಗ ಪರಾರಿಯಾಗುತ್ತಿದ್ದ ಅಬ್ದುಲ್ ರಹಿಮಾನ್‌ನನ್ನು ಗುರುತಿಸಿದ್ದರು. ಈ ವೇಳೆ ಯುವತಿ ಸಹಾಯಕ್ಕಾಗಿ ಕೂಗಿಕೊಂಡಾಗ ಸೇರಿದ ಸ್ಥಳೀಯರಿಗೆ ಮಾಹಿತಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು.

ಅಬ್ದುಲ್ ರಹಿಮಾನ್ ಕಾಂಪೌಂಡ್‌ ಹಾರಿ ಅಲ್ಲಿಂದ ಓಡಿ ಹೋಗಿದ್ದು, ಬಳಿಕ ಅವರ ಮನೆಯ ಮುಂದಿನ ಗೇಟ್ ಮೂಲಕ ಮನೆಗೆ ತೆರಳಿ ಮುಂಬಾಗಿಲು ಬಡಿಯುತ್ತಿದ್ದ. ಕೂಡಲೇ ಯುವತಿಯ ತಾಯಿ ತಮ್ಮ ನೆರೆ ಮನೆಯ ಹರೀಶ್ ಪಟ್ಲ ಹಾಗೂ ಚಂದ್ರಶೇಖರ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಅವರಿಬ್ಬರು ಮನೆಗೆ ಬರುವುದನ್ನು ನೋಡಿದ ಅಬ್ದುಲ್ ರಹಿಮಾನ್ ಅಲ್ಲಿಂದ ಪರಾಯಿಯಾಗಿದ್ದ. ಬಳಿಕ ಯುವತಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಈ ಘಟನೆ ನಡೆದ ಬಗ್ಗೆ ಮಾಹಿತಿ ತಿಳಿದು ಠಾಣೆಯ ಮುಂದೆ ಯುವಕರು ಸೇರಿದ್ದರು. ಠಾಣೆಗೆ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮುಖಂಡರಾದ ಸುರೇಶ್ ಅತ್ರೆಮಜಲು, ರಮೇಶ್ ಭಂಡಾರಿ ಧಾವಿಸಿ, ಆತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.