ADVERTISEMENT

ಉಪ್ಪಿನಂಗಡಿ: ಗೋಹತ್ಯೆ– ಮನೆ ಜಪ್ತಿ ಮಾಡಿ ದಂಪತಿ ಸಹಿತ ಮೂವರ ಬಂಧಿಸಿದ ಪೊಲೀಸರು

ಬಾರ್ಯ: ಅಕ್ರಮ ಗೋಹತ್ಯೆ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 7:06 IST
Last Updated 28 ಫೆಬ್ರುವರಿ 2026, 7:06 IST
ಉಪ್ಪಿನಂಗಡಿ ಸಮೀಪ ಬಾರ್ಯ ಗ್ರಾಮದ ಹೊಸವಕ್ಲು ಎಂಬಲ್ಲಿ ಗೋಹತ್ಯೆ ಮಾಡಲು ಬಳಸಿದ ಮನೆಯ ಆವರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ
ಉಪ್ಪಿನಂಗಡಿ ಸಮೀಪ ಬಾರ್ಯ ಗ್ರಾಮದ ಹೊಸವಕ್ಲು ಎಂಬಲ್ಲಿ ಗೋಹತ್ಯೆ ಮಾಡಲು ಬಳಸಿದ ಮನೆಯ ಆವರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ   

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಾರ್ಯ ಗ್ರಾಮದ ಹೊಸವಕ್ಲು ಎಂಬಲ್ಲಿ, ಮನೆಯೊಂದರ ಆವರಣದಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಿ ಮಾಂಸ ಮಾರುತ್ತಿರುವುದನ್ನು ಪತ್ತೆ ಮಾಡಿರುವ ಉಪ್ಪಿನಂಗಡಿ ಪೊಲೀಸರು ಮನೆ ಜಪ್ತಿ ಮಾಡಿ ಆರೋಪಿ ದಂಪತಿ ಸಹಿತ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಗುರುವಾರ ರಾತ್ರಿ ಬಾರ್ಯ ಗ್ರಾಮದ ಹೊಸವಕ್ಲು ನಿವಾಸಿ ಅಬ್ದುಲ್ ರಹಿಮಾನ್ ಮನೆ ಆವರಣದಲ್ಲಿ ಗೋಹತ್ಯೆ ಮಾಡಿ ಮಾಂಸವನ್ನು ಪೊಟ್ಟಣ ಮಾಡಿ ಆಟೊ ರಿಕ್ಷಾಗೆ ತುಂಬಿಸುತ್ತಿದ್ದಾಗ ದಾಳಿ ನಡೆಸಿದ ಉಪ್ಪಿನಂಗಡಿ ಪಿಎಸ್‌ಐ ಸುತೇಶ್, ಸಿಬ್ಬಂದಿ ಆಟೊರಿಕ್ಷಾ, ಸುಮಾರು 56 ಕೆ.ಜಿ. ಮಾಂಸ, ತೂಕದ ಯಂತ್ರ, ಮೊಬೈಲ್ ಮೊದಲಾದವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

3 ಮಂದಿ ಬಂಧನ, ಮನೆ ಆವರಣ ಜಪ್ತಿ: ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಬ್ದುಲ್ ರಹಿಮಾನ್ ಎಂಬುವರು ಜಾನುವಾರು ವಧೆ ಮಾಡಲು ಬಳಸಿದ್ದ ಮನೆಯ ಆವರಣವನ್ನು ಜಪ್ತಿ ಮಾಡಲಾಗಿದೆ. ಆರೋಪಿ ಅಬ್ದುಲ್ ರಹಿಮಾನ್, ಆತನ ಪತ್ನಿ ರಹಿಮತ್ ಹಾಗೂ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.