ADVERTISEMENT

ಉಪ್ಪಿನಂಗಡಿ: ಶತಾಯುಷಿ ‘ಮಾಳಿಗೆ ಡಾಕ್ಟರ್’ ಖ್ಯಾತಿಯ ಮುದ್ರಜೆ ರಾಮಚಂದ್ರ ಭಟ್ ನಿಧನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 5:11 IST
Last Updated 30 ಜುಲೈ 2025, 5:11 IST
ಡಾ.ರಾಮಚಂದ್ರ ಭಟ್
ಡಾ.ರಾಮಚಂದ್ರ ಭಟ್   

ಉಪ್ಪಿನಂಗಡಿ (ದಕ್ಷಿಣ ಕನ್ನಡ): ಇಲ್ಲಿನ ವೈದ್ಯ, ಕೆಲ ದಿನಗಳ ಹಿಂದೆ 100ನೇ ವರ್ಷಕ್ಕೆ ಕಾಲಿರಿಸಿದ್ದ ಡಾ.ಮುದ್ರಜೆ ರಾಮಚಂದ್ರ ಭಟ್ ಹೃದಯಾಘಾತದಿಂದ ಸೋಮವಾರ ರಾತ್ರಿ ನೆಕ್ಕಿಲಾಡಿಯ ಅವರ ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು, ಪುತ್ರಿ ಇದ್ದಾರೆ.

1952ರಿಂದ ವೈದ್ಯಕೀಯ ಸೇವೆ ನೀಡುತ್ತಿದ್ದರು. ಉಪ್ಪಿನಂಗಡಿ ಹಳೇ ಬಸ್ ನಿಲ್ದಾಣ ಕಟ್ಟಡದ ಮೊದಲ ಮಹಡಿಯಲ್ಲಿ ಕ್ಲಿನಿಕ್ ತೆರೆದು ಸೇವೆ ನೀಡುತ್ತಿದ್ದು,ಇದೇ ಕಾರಣಕ್ಕೆ ‘ಮಾಳಿಗೆ ಡಾಕ್ಟರ್’ ಎಂದೇ ಹೆಸರಾಗಿದ್ದರು. ಬಡವರಿಗೆ ಉಚಿತ ಔಷಧೋಪಚಾರ ನೀಡುತ್ತಿದ್ದರು.

ಕಾಂಚನ ಲಕ್ಷ್ಮೀನಾರಾಯಣ ಸಂಗೀತ ಶಾಲೆ, ಲಯನ್ಸ್ ಕ್ಲಬ್, ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಶ್ರಮಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.