
ಉಪ್ಪಿನಂಗಡಿ: ಇಲ್ಲಿನ ಲಕ್ಷ್ಮಿ ವೆಂಕಟರಮಣ ದೇವಳ ವಾರ್ಷಿಕ ಜಾತ್ರೋತ್ಸವದ ಬ್ರಹ್ಮ ರಥೋತ್ಸವವು ಮಂಗಳವಾರ ನಡೆಯಿತು.
ಬೆಳಿಗ್ಗೆ ಮಹಾ ಪಂಚಾಮೃತಾಭಿಷೇಕ, ಮಧ್ಯಾಹ್ನ ಮಹಾಪೂಜೆ ಯಜ್ಞಾರಂಭ ಬಳಿಕ ರಥಶುದ್ಧಿ, ಯಜ್ಞಾರತಿ, ಪೂರ್ಣಾಹುತಿ, ಮಹಾಬಲಿ, ಸಂಜೆ ದೇವರ ರಥಾರೋಹಣ ನಡೆದು ಬ್ರಹ್ಮರಥೋತ್ಸವ ಜರುಗಿತು. ರಾತ್ರಿ ಪೂಜೆ, ಉತ್ಸವ, ಏಕಾಂತ ಸೇವೆ ನೆರವೇರಿತು.
ದೇವಳದ ಆಡಳಿತ ಮೊಕ್ತೇಸರ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಯು.ನಾಗರಾಜ್ ಭಟ್, ಕೆ.ಅನಂತರಾಯ ಕಿಣಿ, ಯಂ.ರತ್ನಾಕರ ಶೆಣೈ, ಪಿ. ದೇವಿದಾಸ ಭಟ್, ಪ್ರಮುಖರಾದ ಕರಾಯ ರಾಮಚಂದ್ರ ನಾಯಕ್, ಎಂ.ಪ್ರಭಾತ್ ಭಟ್, ಎಚ್.ವಾಸುದೇವ ಪ್ರಭು, ಶ್ರೀಕಾಂತ್ ಭಟ್, ಎಂ. ಪ್ರಕಾಶ್ ಭಟ್, ಕರಾಯ ಗಣೇಶ ನಾಯಕ್, ಎನ್.ಪ್ರಭಾತ್ ಪೈ, ಸುಜೀರ್ ಗಣಪತಿ ನಾಯಕ್, ಬಿಜೆಪಿ ಮುಖಂಡ ಸಂಜೀವ ಮಠಂದೂರು, ಸಹಸ್ರಲಿಂಗೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.